ಕರ್ನಾಟಕ

karnataka

By

Published : Jun 12, 2020, 2:04 PM IST

ETV Bharat / state

ಕರವೇ ಅಧ್ಯಕ್ಷರು ಸಾಮಾಜಿಕ ಕಳಕಳಿ ಇರುವವರು: ಸೇತುರಾಮ್ ಅಭಿಪ್ರಾಯ

ರಾಜ್ಯದಲ್ಲಿ ಜಲ, ಭಾಷೆ, ನೆಲ, ಗಡಿ ಸಮಸ್ಯೆಯ ಬಗ್ಗೆ ತಕ್ಷಣ ಸ್ಪಂದಿಸುವಂತಹ ವ್ಯಕ್ತಿಯಿದ್ದರೆ, ಅದು ನಮ್ಮ ಸಂಘಟನೆಯ ಅಧ್ಯಕ್ಷರು ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಅರಸೀಕೆರೆ ಕರವೇ ಅಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದ್ದಾರೆ.

Birthday celebration of  Narayana Gowda  at hassan
ಸನ್ಮಾನ ಕಾರ್ಯಕ್ರಮ

ಹಾಸನ/ಅರಸೀಕೆರೆ: ನಾಡು - ನುಡಿ-ಜಲ-ಭಾಷೆ ಸಮಸ್ಯೆಗೆ ಸದಾ ಸ್ಪಂದಿಸುತ್ತ ನಾಡಿಗಾಗಿ ಹೋರಾಟ ಮಾಡ್ತಿರೋ ಏಕೈಕ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯೆಂದರೆ ಅದು ಕರವೇ ಅಧ್ಯಕ್ಷ ನಾರಾಯಣಗೌಡ ಎಂದು ಹಿರಿಯ ಪತ್ರಕರ್ತ ಸೇತುರಾಮ್ ಅಭಿಪ್ರಾಯಪಟ್ಟರು.

ಜಿಲ್ಲೆಯ ಅರಸೀಕೆರೆ ಪಟ್ಟಣದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹುಟ್ಟು ಹಬ್ಬದ ನಿಮಿತ್ತ ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯ ಕೊರೊನಾ ವಾರಿಯರ್ಸ್​​​ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು. ನಾರಾಯಣಗೌಡ 54 ವರ್ಷಕ್ಕೆ ಕಾಲಿಡುತ್ತಿದ್ದು, ತಾಲೂಕಿನ ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ ಎಂದರು.

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹುಟ್ಟು ಹಬ್ಬ ಕಾರ್ಯಕ್ರಮ

ತಾಲೂಕು ಕರವೇ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕನ್ನಡಕ್ಕಾಗಿ, ಕನ್ನಡದ ಉಳಿವಿಗಾಗಿ ಹಗಲು ಇರುಳು ಎನ್ನದೇ ಶ್ರಮಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ತುರ್ತು ವಾಹನದ ಚಾಲಕರುಗಳಿಗೆ, ಆರೋಗ್ಯ ಸಹಾಯಕ ಡಾ.ಕರಿಯಪ್ಪ ಸೇರಿದಂತೆ 15ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್​ಗಳಿಗೆ ಶಾಲು ಹೊದಿಸಿ ಸನ್ಮಾನಿಸಿದ್ರು. ಬಳಿಕ ಹುಟ್ಟುಹಬ್ಬದ ನಿಮಿತ್ತ ಅಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ಹಂಚಿದರು.

ABOUT THE AUTHOR

...view details