ಹಾಸನ/ಅರಕಲಗೂಡು: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದ ಜೊತೆ ಕೈಜೋಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದರು. ಈ ಮನವಿ ಹಿನ್ನೆಲೆಯಲ್ಲಿ ಜಿಲ್ಲೆಯ ಅರಕಲಗೂಡು ತಾಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಂಘ 60,500 ರೂ. ನೀಡಿದೆ.
ಸಿಎಂ ಪರಿಹಾರ ನಿಧಿಗೆ 65,500 ರೂ. ಕೊಟ್ಟ ಅರಕಲಗೂಡು ಕೃಷಿ ಪರಿಕರ ಮಾರಾಟ ಸಂಘ - ತಾಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಂಘ
ಕೊರೊನಾ ವಿರುದ್ಧ ಹೋರಾಟಕ್ಕೆ ರಾಜ್ಯದ ನಾನಾ ಸಂಘ ಸಂಸ್ಥೆಗಳು, ಜನ ಸಾಮಾನ್ಯರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣದ ನೆರವು ಹರಿಬರುತ್ತಿದೆ. ಹಾಸನ ಜಿಲ್ಲೆಯ ಅರಕಲಗೂಡು ಕೃಷಿ ಪರಿಕರಗಳ ಮಾರಾಟ ಸಂಘ ಸೇರಿಕೊಂಡಿದ್ದು, ಸಿಎಂ ಪರಿಹಾರ ನಿಧಿಗೆ 65,500 ರೂ. ದೇಣಿಗೆಯಾಗಿ ನೀಡಿದೆ.
ಸಿಎಂ ಪರಿಹಾರ ನಿಧಿಗೆ 65,500 ರೂ.ದೇಣಿಗೆ ನೀಡಿದ ಅರಕಲಗೋಡು ಕೃಷಿ ಪರಿಕರಗಳ ಮಾರಾಟ ಸಂಘ
ಸಂಘದ ಕಾರ್ಯದರ್ಶಿ ಎಚ್.ಎಂ ಮಾತನಾಡಿ, ಕೊರೊನಾ ರೋಗದ ವಿರುದ್ಧದ ಸಮರದಲ್ಲಿ ಕೃಷಿ ಪರಿಕರಗಳ ಮಾರಾಟ ಸಂಘವು ಸರ್ಕಾರಕ್ಕೆ ದೇಣಿಗೆ ನೀಡಿದೆ. ಜನರ ಹಿತದೃಷ್ಟಿಯಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಯಾರು ಮನೆಯಿಂದ ಹೊರಬರದೆ ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಸಂಘದ ಉಪಾಧ್ಯಕ್ಷರು, ಸದಸ್ಯರು ಹಾಗೂ ಮಂಜುನಾಥ್, ಚೇತನ್, ಭರತ್ ಹುಲಿಕಲ್, ಗ್ರೊಮಾರ್ ನರಸಿಂಹ ಸೇರಿದಂತೆ ಇತರರು ಉಪಸ್ಥಿತರಿದ್ದರು.