ಹಾಸನ : ನಗರದಲ್ಲಿ ಡೈರಿ ವೃತ್ತದ ಬಳಿ ಬೆಳಗ್ಗೆ ಬಸ್ಗಾಗಿ ಕಾಯುತ್ತಿದ್ದ ಯುವತಿ ಹೊತ್ತೊಯ್ದು ಕಾರಿನಲ್ಲೇ ಮತ್ತೊಬ್ಬರ ಸಹಾಯದಿಂದ ಬಲವಂತವಾಗಿ ತಾಳಿಕಟ್ಟಿದ ಘಟನೆ ನಡೆದಿದೆ.
ಬಲವಂತವಾಗಿ ಕರೆದೊಯ್ದು ಕಾರಿನಲ್ಲೇ ತಾಳಿ ಕಟ್ಟಿದ ಭೂಪ!
ಹಾಸನ ನಗರದಲ್ಲಿ ಡೈರಿ ವೃತ್ತದ ಬಳಿ ಬೆಳಗ್ಗೆ ಬಸ್ಗಾಗಿ ಕಾಯುತ್ತಿದ್ದ ಯುವತಿ ಹೊತ್ತೊಯ್ದು ಕಾರಿನಲ್ಲೇ ಮತ್ತೊಬ್ಬರ ಸಹಾಯದಿಂದ ಬಲವಂತವಾಗಿ ತಾಳಿಕಟ್ಟಿದ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
ಯುವತಿಯ ಅತ್ತೆ ಮಗನಾದ ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ಮನು ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ತನ್ನ ಸ್ನೇಹಿತನಿಂದ ಹುಡುಗಿಯನ್ನ ಬಂಧಿಸಿಟ್ಟು ತಾಳಿ ಕಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಮನು ಅತ್ತೆ ಮಗಳನ್ನ ಇಷ್ಟಪಡುತ್ತಿದ್ದ, ಆದರೆ, ಯುವತಿ ಈತನನ್ನು ಮದುವೆಯಾಗಲು ನಿರಾಕರಿಸಿದ್ದಳು. ಯುವತಿಯ ವಿರೋಧವಿದ್ದರೂ ಬಲವಂತವಾಗಿ ಆಕೆಯನ್ನು ಹೊತ್ತೊಯ್ದು ತಾಳಿ ಕಟ್ಟಿದ್ದಾನೆ ಎಂಬ ದೂರಿದೆ.
ಇನ್ನು ಯುವತಿಯನ್ನು ಹೊತ್ತೊಯ್ದು ಘಟನೆ ಬಗ್ಗೆ ಪೋಷಕರು ದುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.