ಹಾಸನ:ಜಿಲ್ಲೆಯ ಸಕಲೇಶಪುರ ತಾಲೂಕಿನ ಹುಲ್ಲಹಳ್ಳಿ ಕ್ಯಾನಳ್ಳಿ ರಸ್ತೆ ಪಕ್ಕ ಮೇ 21ರಂದು ಓರ್ವ ಯುವತಿಯ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಯಿಂದ ಇದೊಂದು ಕೊಲೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿಗೆ ಬಲೆ ಬೀಸಿದ್ದರು.
ಪ್ರೇಯಸಿಯನ್ನೇ ಕೊಂದಿದ್ದ ಪ್ರಿಯಕರ ಅಂದರ್ - kannadanews
ರಸ್ತೆ ಬದಿ ಸಿಕ್ಕ ಅಪರಿಚಿತ ಯುವತಿಯ ಶವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಮೇ 11ರಂದು ಪ್ರವಾಸಕ್ಕೆಂದು ಬಂದು ಕತ್ತು ಹಿಸುಕಿ ಯುವತಿಯನ್ನು ಕೊಲೆಗೈದು ಸಕಲೇಶಪುರ ತಾಲೂಕಿನ ಹುಲ್ಲಹಳ್ಳಿ-ಕ್ಯಾನಹಳ್ಳಿ ನಡುವಿನ ರಸ್ತೆಯ ಪಕ್ಕದಲ್ಲಿ ಮೃತ ದೇಹವನ್ನು ಎಸೆದು ಅಲ್ಲಿಂದ ಪರಾರಿಯಾಗಿದ್ದ.21 ದಿನದ ಬಳಿಕ ಯುವತಿಯನ್ನು ಕೊಲೆ ಮಾಡಿದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಯುವತಿಯ ಹೆಸರು ಸುನೀತಾ ಎಂದು ತಿಳಿದುಬಂದಿದ್ದು ಆಕೆಯ ಪ್ರಿಯಕರ ಡೇವಿಡ್ ಕುಮಾರ್ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
ಒಟ್ಟಾರೆ ಅಪರಿಚಿತ ಯುವತಿಯ ಶವ ಸಿಕ್ಕ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ವಿಚಾರಕ್ಕೆ ಮಾಡಿಕೊಂಡ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ತನಿಖೆಯಿಂದ ಹೊರಬಿದ್ದಿದೆ. 21 ದಿನದ ಬಳಿಕ ಪ್ರಕರಣದ ಆರೋಪಿಯನ್ನು ಜೈಲಿಗಟ್ಟುವಲ್ಲಿ ಸಕಲೇಶಪುರ ಪೊಲೀಸರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.