ಹಾಸನ: ಕೊರೊನಾ ಭೀತಿ ನಡುವೆಯೇ ರಾಜ್ಯದ 550 ಗುತ್ತಿಗೆ ಆಧಾರದ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಶಾಕ್ ನೀಡಲು ಸಜ್ಜಾಗಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದರೂ ಸಹ ತಮ್ಮನ್ನು ಖಾಯಂ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಖಾಯಂ ಸೇವೆ, ವೇತನ ಹೆಚ್ಚಳ ಸೇರಿದಂತೆ ಸೇವಾ ಭದ್ರತೆಗೆ ಆಗ್ರಹಿಸಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸಾಮೂಹಿಕ ರಾಜೀನಾಮೆ ಮೂಲಕ ಒತ್ತಡ ಹೇರಲು ಮುಂದಾದ ವೈದ್ಯ ಸಮೂಹ, ಹಾಸನದ 35 ವೈದ್ಯರು ಸೇರಿದಂತೆ ರಾಜ್ಯದ 550 ವೈದ್ಯರೆಲ್ಲ ಒಟ್ಟಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೊತೆಗೆ ಕೂಡಲೇ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.