ಕರ್ನಾಟಕ

karnataka

ETV Bharat / state

ಕೊರೊನಾಗಿಂತ ಅಮಾವಾಸ್ಯೆಯೇ ಇವರಿಗೆ ಮುಖ್ಯ: ಸಾಮಾಜಿಕ ಅಂತರಕ್ಕೆ ಬೈ ಬೈ - corona

ಗ್ರೇನ್ ಮಾರ್ಕೆಟ್ ಹಾಗೂ ಲಕ್ಷ್ಮೇಶ್ವರ ಮಾರ್ಕೆಟ್​ನಲ್ಲಿ ಜನಸ್ತೋಮವೇ ಹರಿದು ಬಂದಿದೆ. ಜಿಲ್ಲೆಯಲ್ಲಿ ಲಾಕ್​ಡೌನ್ ನಿಯಮ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಕೊರೊನಾ ಮಧ್ಯೆಯೂ ಅಕ್ಷತ್ತದಗಿ ಅಮಾವಾಸ್ಯೆ ಮಾಡಲು ಜನರು ಕಿರಾಣಿ, ಹೂವು, ಹಣ್ಣು, ದಿನಸಿ, ಬಟ್ಟೆ ಖರೀದಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ.

ಬೇಜವಾಬ್ದಾರಿಗಳು
ಬೇಜವಾಬ್ದಾರಿಗಳು

By

Published : Apr 22, 2020, 2:11 PM IST

ಗದಗ: ಲಾಕ್​ಡೌನ್ ಮಧ್ಯೆಯೂ ಅಕ್ಷತ್ತದಗಿ ಅಮಾವಾಸ್ಯೆ ನೆಪದಲ್ಲಿ ಜನರು‌ ಮನೆಬಿಟ್ಟು ಮಾರ್ಕೆಟ್​ಗೆ ಲಗ್ಗೆಯಿಟ್ಟಿದ್ದಾರೆ. ಸಾಮಾಜಿಕ ಅಂತರವನ್ನು ಬದಿಗಿಟ್ಟು ನಾ ಮುಂದು ತಾ ಮುಂದು ಎಂದು ಮಾರ್ಕೆಟ್​​ಗಳ ಮೇಲೆ ಮುಗಿಬಿದ್ದಿದ್ದಾರೆ.

ನಗರದ ಗ್ರೇನ್ ಮಾರ್ಕೆಟ್ ಹಾಗೂ ಲಕ್ಷ್ಮೇಶ್ವರ ಮಾರ್ಕೆಟ್​ನಲ್ಲಿ ಜನಸ್ತೋಮ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಲಾಕ್​ಡೌನ್ ನಿಯಮ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಕೊರೊನಾ ಮಧ್ಯೆಯೂ ಅಕ್ಷತ್ತದಗಿ ಅಮವಾಸ್ಯೆ ಮಾಡಲು ಜನರು ಕಿರಾಣಿ, ಹೂವು, ಹಣ್ಣು, ದಿನಸಿ, ಬಟ್ಟೆ ಖರೀದಿಸಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ.

ಲಾಕ್​ಡೌನ್ ಲೆಕ್ಕಿಸದೇ ಓಡಾಡುತ್ತಿರುವ ಗದಗದ ಜನ

ಸಾಮಾಜಿಕ ಅಂತರ, ಮುಖಕ್ಕೆ‌ ಮಾಸ್ಕ್ ಹಾಕಿಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ. ಕೆಲ ಬಟ್ಟೆ ಅಂಗಡಿಗಳು ರಾಜಾರೋಷವಾಗಿ ಓಪನ್ ಮಾಡಿಕೊಂಡು ಮಾರಾಟ ಮಾಡ್ತಿದ್ದಾರೆ. ಗದಗ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅಧಿಕಾರಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕೊರೊನಾಗೆ ಕ್ಯಾರೆ ಅನ್ನದ ಜನರು ಮನೆಬಿಟ್ಟು ಮಾರ್ಕೆಟ್​ಗೆ ಮುಗಿಬಿದ್ದಿರುವುದು ವಿಪರ್ಯಾಸವೇ ಸರಿ.

ABOUT THE AUTHOR

...view details