ಗದಗ:ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮುದ್ರಣ ಕಾಶಿ ಗದಗದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕಪ್ಪತ್ತಗುಡ್ಡದ ಅಂಚಿನಲ್ಲಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಕ್ಲಿಷ್ಟಕರ ಟ್ರ್ಯಾಕ್ನಲ್ಲಿ ನಡೆದ ಸೈಕಲ್ ಸಾಹಸಿಗಳ ಕಸರತ್ತು ಮೈ ಜುಮ್ಮೆನಿಸುವಂತಿತ್ತು. ಕಲ್ಲು, ತಗ್ಗು, ಹದಗೆಟ್ಟ ರಸ್ತೆಯಲ್ಲಿ ಶರವೇಗದಲ್ಲಿ ಸೈಕ್ಲಿಂಗ್ ಮಾಡುವ ಮೂಲಕ ಸ್ಪರ್ಧಾಳುಗಳು ಸಾಹಸ ಮೆರೆದರು. ಮೌಂಟೇನ್ ಬೈಕ್ ಸೈಕ್ಲಿಂಗ್ನಲ್ಲಿ ವಿವಿಧ ರಾಜ್ಯಗಳ ಒಟ್ಟು 435 ಹಾಗೂ ರಾಜ್ಯದ 34 ಕ್ರೀಡಾಪಟುಗಳು ಭಾಗವಹಿಸಿದ್ದರು.