ಗದಗ: ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಯ ಕುರಿತು ಸರ್ಕಾರವು ಮಾರ್ಗಸೂಚಿ ಬಿಡುಗಡೆ ಮಾಡಬೇಕು ಎಂದು ಶ್ರೀರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಒತ್ತಾಯಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದುವರೆಗೂ ಗಣಪತಿ ಪ್ರತಿಷ್ಠಾಪನೆ ಕುರಿತು ಯಾವ ನಡವಳಿಕೆಗಳನ್ನ ಬಿಡುಗಡೆ ಮಾಡಿಲ್ಲ. ಪೊಲೀಸ್ ಇಲಾಖೆಯ ಮೂಲಕ ಗಣಪತಿ ಮಹಾಮಂಡಳಿಗಳನ್ನ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಅಂತ ಆರೋಪಿಸಿದರು.
ಶ್ರೀರಾಮ ಸೇನೆ ಮುಖಂಡ ಗಂಗಾಧರ ಕುಲಕರ್ಣಿ ಸುದ್ದಿಗೋಷ್ಠಿ ಬಾರ್ಗಳನ್ನ ಓಪನ್ ಮಾಡುವುದಕ್ಕೆ ಸರ್ಕಾರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡುತ್ತೆ. ಆದರೆ ಗಣಪತಿ ಪ್ರತಿಷ್ಠಾಪನೆ ಮಾಡಲು ಹಿಂದೇಟು ಹಾಕುತ್ತೆ. ಜಿಲ್ಲಾಧಿಕಾರಿಗಳ ಮೂಲಕ, ಪೊಲೀಸ್ ಇಲಾಖೆಯ ಮೂಲಕ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ನಿಷೇಧ ಮಾಡಲಾಗಿದೆ ಅಂತ ತಿಳಿಸುತ್ತಿದ್ದಾರೆ. ಹೀಗಾಗಿ ಸೋಮವಾರದಂದು ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಅಂತ ತಿಳಿಸಿದರು.
ಇನ್ನು ಒಂದು ವೇಳೆ ಮಾರ್ಗಸೂಚಿ ಬಿಡುಗಡೆ ಮಾಡಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕೊಡದಿದ್ದಲ್ಲಿ 22 ರಂದು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಟಾಪನೆ ಮಾಡ್ತೇವೆ. ಬೇಕಾದರೆ ನಮ್ಮನ್ನ ಜೈಲಿಗೆ ಹಾಕಿದ್ರೂ ಸರಿ ಇಲ್ಲ ಕೇಸ್ ಹಾಕಿದರೂ ಸರಿ ಹಿಂಜರಿಯಲ್ಲ ಅಂದರು.