ಕರ್ನಾಟಕ

karnataka

ETV Bharat / state

ಗದಗ ಜಿಲ್ಲೆಯಲ್ಲಿ ಒಂದೇ ದಿನ ಸರಳವಾಗಿ ಸಪ್ತಪದಿ ತುಳಿದ 50ಕ್ಕೂ ಹೆಚ್ಚು ಜೋಡಿಗಳು! - Simple wedding in the Gadag between the lockdown

ಗದಗ ಜಿಲ್ಲೆಯಲ್ಲಿಂದು ಸುಮಾರು 50 ಕ್ಕೂ ಹೆಚ್ಚು ಜೋಡಿಯ ಸರಳ ಮದುವೆ ನಡೆದಿವೆ. ಮದುವೆ ನಡೆಯುವ ಹಳ್ಳಿ ಹಳ್ಳಿಗಳಲ್ಲಿ ಪೊಲೀಸರು ಮುಂದೆ ನಿಂತು ‌ಸರಳ‌ವಾಗಿಯೇ ಮದುವೆ ಮಾಡಿಸಿದ್ದಾರೆ.

Simple wedding in the Gadag between the lockdown
ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು

By

Published : May 24, 2020, 5:37 PM IST

ಗದಗ: ಲಾಕ್​​​​ಡೌನ್ ಹಾಗೂ ಕರ್ಫ್ಯೂ ನಡುವೆ ಗದಗ ಜಿಲ್ಲೆಯಲ್ಲಿಂದು ಸುಮಾರು 50 ಕ್ಕೂ ಹೆಚ್ಚು ಜೋಡಿಗಳ ಸರಳ ಮದುವೆ ನಡೆದಿವೆ. ವಿವಾಹ ನಡೆಯುವ ಹಳ್ಳಿ ಹಳ್ಳಿಗಳಲ್ಲಿ ಪೊಲೀಸರೇ ಮುಂದೆ ನಿಂತು ‌ಸರಳ‌ ರೀತಿಯಲ್ಲಿ ಮದುವೆ ಮಾಡಿಸಿದ್ದಾರೆ.

ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು

ಗದಗ ನಗರ ಹಾಗೂ ತಾಲೂಕಿನ ಹೊಂಬಳ, ಹುಲಕೋಟಿ, ಕುರ್ತಕೋಟಿ, ‌ಬೆಳಹೊಡ, ಚಿಕ್ಕ ಹಂದಿಗೋಳ, ಕದಡಿ, ಬಳಗಾನೂರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಜೋಡಿ ಕೊರೊನಾದ‌ ನಡುವೆಯೂ ನವ ದಾಂಪತ್ಯಕ್ಕೆ ಕಾಲಿಟ್ಟಿವೆ.

ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು
ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು

ಗ್ರಾಮೀಣ ಭಾಗದಲ್ಲಿ ನಡೆದ ಮದುವೆಗಳು ಗದಗ ಗ್ರಾಮೀಣ ಪೊಲೀಸ್​​ ಠಾಣೆಯ ಪಿಎಸ್​​​ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ನಡೆದವು. ಸರ್ಕಾರ ವಿಧಿಸಿದ್ದ ನಿರ್ಬಂಧನೆ ಪಾಲಿಸಿ, ಕಡಿಮೆ‌ ಜನಸಂಖ್ಯೆ, ಸಾಮಾಜಿಕ ಅಂತರ, ಮುಖಕ್ಕೆ‌ ಮಾಸ್ಕ್ ಧರಿಸಿ ಸಪ್ತಪದಿ ತುಳಿದರು.

ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು
ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು

ವಧು-ವರರ ಸಂಬಂಧಿಗಳು ಸಹ ಸಾಮಾಜಿಕ ಅಂತರ‌ ಕಾಯ್ದುಕೊಂಡು ಅಕ್ಷತೆ ಹಾಕಿ ಆಶೀರ್ವದಿಸಿದರು. ಕೊರೊನಾ ಅಟ್ಟಹಾಸಕ್ಕೆ ಮದುವೆ ಸಂಭ್ರಮಗಳು ಕಳೆಗುಂದಿದಂತಾಗಿದೆ. ಆಡಂಬರಕ್ಕೆ ಕಡಿವಾಣ ಹಾಕಲಾಗಿದೆ.

ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು
ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು
ಗದಗಿನಲ್ಲಿ ಸರಳವಾಗಿ ಸಪ್ತಪದಿ ತುಳಿದ ವಧು-ವರರು

For All Latest Updates

TAGGED:

lockdown

ABOUT THE AUTHOR

...view details