ಗದಗ: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸರ್ಕಾರ ವಿವೇಕದ ಹೆಜ್ಜೆ ಇಡುತ್ತಿಲ್ಲ ಎಂದು ಶಾಸಕ ಹೆಚ್.ಕೆ.ಪಾಟೀಲ್ ಆರೋಪಿಸಿದರು.
ಲಾಕ್ಡೌನ್ ತೆರವುಗೊಳಿಸಿದ್ದೇ ಮದ್ಯದ ಅಂಗಡಿ ತೆರೆಯಲು: ಹೆಚ್.ಕೆ.ಪಾಟೀಲ್ ಆರೋಪ
ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಸರ್ಕಾರ ಯೋಚನೆ ಮಾಡಬೇಕಿದೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು.
ಶಾಸಕ ಹೆಚ್.ಕೆ.ಪಾಟೀಲ್
ಲಾಕ್ಡೌನ್ ಯಶಸ್ವಿಯಾಗುವ ವೇಳೆಯಲ್ಲಿ ತೆರವುಗೊಳಿಸಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ಅದು ಮದ್ಯದ ಅಂಗಡಿ ತೆರೆಯಲು ಲಾಕ್ಡೌನ್ ತೆರವುಗೊಳಿಸಿದ್ದಾರೆ ಎಂದು ಕಿಡಿಕಾರಿದರು.
ಗದಗದಲ್ಲಿ ಪ್ರತಿಭಟನೆ ಮಾಡಿದ ಬಳಿಕ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ವೈದ್ಯರು, ನರ್ಸ್, ಪೊಲೀಸರು, ಪತ್ರಕರ್ತರು, ವಿವಿಧ ಕ್ಷೇತ್ರಗಳ ಸರ್ಕಾರಿ ನೌಕರರು ಕೊರೊನಾಗೆ ತುತ್ತಾಗುತ್ತಿದ್ದಾರೆ. ಈಗ ಅವರಿಗೆ ಲಾಕ್ಡೌನ್ ಮತ್ತೆ ಮಾಡಬೇಕು ಎಂದು ಮನವರಿಕೆಯಾಗುತ್ತಿದೆ ಎಂದರು.