ಗದಗ: ಜಿಲ್ಲೆಯಲ್ಲಿ 80 ವರ್ಷದ ವೃದ್ಧೆಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಗದಗನ 80 ವರ್ಷದ ವೃದ್ದೆಗೆ ಕೊರೊನಾ ಸೋಂಕು.. ಸಚಿವ ಸಿ ಸಿ ಪಾಟೀಲ್ ಸ್ಪಷ್ಟನೆ
ಸೋಂಕಿತ ವೃದ್ಧೆ ಸಂಪರ್ಕದಲ್ಲಿದ್ದ ಗೋವಾದ 7 ಜನ ಸೇರಿ 44ಕ್ಕೂ ಅಧಿಕ ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿ ತಪಾಸಣೆಗೆ ರವಾನಿಸಲಾಗಿದೆ. ಸೋಂಕಿತ ವೃದ್ಧೆ ಇರುವ ರಂಗನವಾಡಿ ಗಲ್ಲಿ ಮತ್ತು ಎಸ್ ಎಂ ಕೃಷ್ಣ ನಗರವನ್ನು ನಿಷೇಧಿತ ಪ್ರದೇಶ ಅಂತಾ ಜಿಲ್ಲಾಧಿಕಾರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾತನಾಡಿದ ಅವರು, ನಗರದ ರಂಗನವಾಡಿ ನಿವಾಸಿಯಾದ ವೃದ್ಧೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಮಾರ್ಚ್ 23ರಂದು ನಗರದ ಎಸ್ ಎಂ ಕೃಷ್ಣಾ ನಗರದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಮಾರ್ಚ್ 23ರ ಕಾರ್ಯಕ್ರಮಕ್ಕೆ 7 ಜನ ಗೋವಾದಿಂದ ವೃದ್ಧೆಯ ಸಂಬಂಧಿಗಳು ಬಂದಿದ್ದರು. ಇದೇ ಕಾರ್ಯಕ್ರಮದಲ್ಲಿ ವೃದ್ಧೆಗೆ ಸೋಂಕು ತಗುಲಿರಬಹುದು ಎಂಬ ಮಾಹಿತಿ ಇದೆ ಎಂದರು.
ಈಗಾಗಲೇ ಸೋಂಕಿತ ವೃದ್ಧೆ ಸಂಪರ್ಕದಲ್ಲಿರುವ ಗೋವಾದ 7 ಜನ ಸೇರಿ 44ಕ್ಕೂ ಅಧಿಕ ಜನರ ರಕ್ತ ಹಾಗೂ ಗಂಟಲು ದ್ರವ ಮಾದರಿ ತಪಾಸಣೆ ರವಾನಿಸಲಾಗಿದೆ. ಸೋಂಕಿತ ವೃದ್ಧೆ ಇರುವ ರಂಗನವಾಡಿ ಗಲ್ಲಿ ಮತ್ತು ಎಸ್ ಎಂ ಕೃಷ್ಣ ನಗರವನ್ನು ನಿಷೇಧಿತ ಪ್ರದೇಶ ಅಂತಾ ಜಿಲ್ಲಾಧಿಕಾರಿಗಳು ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದರು. ಗದಗ ಶಾಸಕ ಹೆಚ್ ಕೆ ಪಾಟೀಲ್, ಡಿಸಿ ಎಂ ಜಿ ಹಿರೇಮಠ, ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಎನ್ ಸತೀಶ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ ಉಪಸ್ಥಿತರಿದ್ದರು.