ಕರ್ನಾಟಕ

karnataka

ETV Bharat / state

ಮೊದಲ ಹಂತದ ಆಶ್ರಯ ಮನೆಗಳು ಗುಡಿಸಲು ವಾಸಿಗಳಿಗೆ : ಹೆಚ್ ಕೆ ಪಾಟೀಲ್

ಶಾಸಕ ಹೆಚ್ ಕೆ ಪಾಟೀಲ್, ಗದಗದ ಗಂಗಿಮಡಿ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ 3630 ಆಶ್ರಯ ಮನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಮೂಲಭೂತ ಸೌಲಭ್ಯಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಮನೆ ಒದಗಿಸಲಾಗುವುದು ಎಂದು‌ ತಿಳಿಸಿದರು.

ಆಶ್ರಯ ಮನೆಗಳ ಪ್ರಗತಿ ಪರಿಶೀಲನೆ‌ ನಡೆಸಿದ ಶಾಸಕರು

By

Published : Jun 12, 2019, 4:47 AM IST

ಗದಗ:ಮೊದಲ ಹಂತದಲ್ಲಿ ನಿರ್ಮಾಣವಾದ ಆಶ್ರಯ ಮನೆಗಳನ್ನು ಪ್ರಥಮವಾಗಿ ಗುಡಿಸಲು ವಾಸಿಗಳಿಗೆ ನೀಡಲಾಗುವುದು ಎಂದು ಶಾಸಕ ಹೆಚ್ ಕೆ ಪಾಟೀಲ್ ಹೇಳಿದರು.

ಇಂದು ನಗರದ ಗಂಗಿಮಡಿ ಬಡಾವಣೆಯ 3630 ಆಶ್ರಯ ಮನೆಗಳ ಪ್ರಗತಿ ಪರಿಶೀಲನೆ‌ ಸಭೆ ನಡೆಸಿದ ಅವರು ಬಳಿಕ ಆಶ್ರಯ ಮನೆಗಳನ್ನು ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಫಿನಿಶಿಂಗ್ ಹೊರತುಪಡಿಸಿ, ಇಲ್ಲಿಯವರೆಗೆ 412 ಮನೆಗಳು ಪೂರ್ಣಗೊಂಡಿವೆ. 1500 ಮನೆಗಳು ಪ್ಲಿಂತ್​ವರೆಗೆ ಬಂದಿವೆ. ಇನ್ನು ಮೂರು ತಿಂಗಳಲ್ಲಿ ಕನಿಷ್ಠ 500 ಮನೆಗಳನ್ನಾದರೂ ಒಂದು ವರ್ಷಕ್ಕಿಂತ ಹೆಚ್ಚು ವಾಸವಿರುವ ಗುಡಿಸಲು ನಿವಾಸಿಗಳಿಗೆ ನೀಡಲಾಗುವುದು. ಮೂಲಭೂತ ಸೌಲಭ್ಯಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಒದಗಿಸಲಾಗುವುದು ಎಂದು‌ ತಿಳಿಸಿದರು.

ಆಶ್ರಯ ಮನೆಗಳ ಪ್ರಗತಿ ಪರಿಶೀಲನೆ‌ ನಡೆಸಿದ ಶಾಸಕರು

ಈ ವೇಳೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹಾಗೂ ವಿವಿಧ‌ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details