ಕರ್ನಾಟಕ

karnataka

ETV Bharat / state

ಶೋರೂಮ್​​ನಲ್ಲಿ ಅಗ್ನಿ ಅವಘಡ: 40ಕ್ಕೂ ಹೆಚ್ಚು ರಾಯಲ್ ಎನ್ ಫೀಲ್ಡ್ ಬೈಕ್ ಬೆಂಕಿಗಾಹುತಿ - 40 ಕ್ಕೂ ಹೆಚ್ಚು ರಾಯಲ್ ಎನ್ ಫೀಲ್ಡ್ ಬೈಕ್ ಬೆಂಕಿಗಾಹುತಿ

ಗದಗದ ಹುಬ್ಬಳ್ಳಿ ರಸ್ತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಶೋ ರೂಮ್​ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಸುಮಾರು 40 ಕ್ಕೂ ಹೆಚ್ಚು ಬೈಕ್​ಗಳು ಬೆಂಕಿಗಾಹುತಿಯಾಗಿವೆ.

Bike showroom
ರಾಯಲ್ ಎನ್ ಫೀಲ್ಡ್ ಶೋ ರೂಮ್​ನಲ್ಲಿ ಬೆಂಕಿ ಅವಘಡ

By

Published : Apr 2, 2022, 8:56 AM IST

ಗದಗ: ಶೋ ರೂಮ್​ನಲ್ಲಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರೂ. ಮೌಲ್ಯದ ಬೈಕ್​ಗಳು ಬೆಂಕಿಗೆ ಆಹುತಿಯಾದ ಘಟನೆ ಗದಗ-ಹುಬ್ಬಳ್ಳಿ ರಸ್ತೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಶೋ ರೂಮ್​ನಲ್ಲಿ ಸಂಭವಿಸಿದೆ. ವೀರೇಶ್ ಗುಗ್ಗರಿ ಎಂಬುವರಿಗೆ ಸೇರಿದ ಶೋ ರೂಮ್ ಇದಾಗಿದ್ದು, ಸುಮಾರು 40 ಕ್ಕೂ ಹೆಚ್ಚು ರಾಯಲ್ ಎನ್ ಫೀಲ್ಡ್ ಬೈಕ್​ಗಳು ಬೆಂಕಿಗಾಹುತಿಯಾಗಿವೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಸುಮಾರು 30ಕ್ಕೂ ಹೆಚ್ಚು ಹೊಸ ಬೈಕ್​ಗಳನ್ನ ತಂದಿಡಲಾಗಿತ್ತು. ಅನೇಕರು ಬುಕ್ ಮಾಡಿ ಯುಗಾದಿ ಸಂಭ್ರಮದಂದು ತೆಗೆದುಕೊಂಡು ಹೋಗಲು ಮುಂದಾಗಿದ್ದರು.

ರಾಯಲ್ ಎನ್ ಫೀಲ್ಡ್ ಶೋ ರೂಮ್​ನಲ್ಲಿ ಬೆಂಕಿ ಅವಘಡ

ಸ್ಥಳಕ್ಕೆ ಗದಗ ನಗರದ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಎನ್ ಎಸ್ ಕಗ್ಗಲಗೌಡ್ರು ನೇತೃತ್ವದಲ್ಲಿ ಎರಡು ಅಗ್ನಿಶಾಮಕ ವಾಹನಗಳು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಶೋ ರೂಮ್ ಬೈಕ್​ ಮಾಲೀಕ ಚಿಂತಾಕ್ರಾಂತರಾಗಿದ್ದಾರೆ.

ಇದನ್ನೂ ಓದಿ:ರೈಲಿನಿಂದ ಹಾರಿ ಸಹೋದರಿಯರಿಬ್ಬರ ಆತ್ಮಹತ್ಯೆ!

ABOUT THE AUTHOR

...view details