ಗದಗ:ನಗರದ ಹೃದಯ ಭಾಗದಲ್ಲಿ ಇರುವ ಹೆರಿಗೆ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ನಿನ್ನೆ ಮತ್ತು ಮೊನ್ನೆ ಎರಡು ದಿನ ಹೆರಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 26 ವರ್ಷದ 9 ತಿಂಗಳ ಗರ್ಭಿಣಿಗೆ ಇಂದು ಕೊರೊನಾ ಸೋಂಕು ತಗುಲಿದೆ ಎನ್ನಲಾಗಿದೆ. ಈ ಮಹಿಳೆ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಓಡಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಗದಗದಲ್ಲಿ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿಗೆ ಕೊರೊನಾ ಶಂಕೆ: ಆಸ್ಪತ್ರೆ ಸಿಬ್ಬಂದಿಗೆ ಆತಂಕ
ನಿನ್ನೆ ಮತ್ತು ಮೊನ್ನೆ ಎರಡು ದಿನ ಹೆರಿಗೆ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಇದೆ.
ಹೆರಿಗೆ ಆಸ್ಪತ್ರೆ ಬಂದಿದ್ದ ಗರ್ಭಿಣೆಗೆ ಕೊರೊನಾ ಶಂಕೆ
ನಗರದ ಕೆ.ಸಿ.ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಒಪಿಡಿ ಮತ್ತು ಲ್ಯಾಬ್ ಸಿಬ್ಬಂದಿ ಮತ್ತು ಕೆಲ ಡಿ ಗ್ರೂಪ್ ಸಿಬ್ಬಂದಿ ಸಹ ಸಂಪರ್ಕದಲ್ಲಿದ್ದು ಅವರಲ್ಲೂ ಆತಂಕ ಶುರುವಾಗಿದೆ. ಸುಮಾರು 15 ಮಂದಿ ವೈದ್ಯರು, ಸ್ಟಾಫ್ ನರ್ಸ್, ಇತರೆ ಸಿಬ್ಬಂದಿ ಗರ್ಭಿಣಿಯ ಸಂಪರ್ಕದಲ್ಲಿದ್ದರು.
ಇದಲ್ಲದೆ ಆಸ್ಪತ್ರೆಗೆ ಬಂದ ನೂರಾರು ಗರ್ಭಿಣಿಯರನ್ನು ವಾಪಸ್ ಕಳುಹಿಸಲಾಗಿದೆ. ಆಸ್ಪತ್ರೆಗೆ ಸ್ಯಾನಿಟೈಸಿಂಗ್ ಮಾಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದಾರೆ.