ಗದಗ: ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳು ಪ್ರವಾಹದಿಂದ ಮುಳಗಡೆಯಾಗಿದ್ದು, ನಿರಾಶ್ರಿತರಾದ ಗ್ರಾಮಸ್ಥರಿಗೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ಪರಿಹಾರ ಸಾಮಾಗ್ರಿಗಳನ್ನ ಒದಗಿಸಿದೆ.
ನೆರೆ ಸಂತ್ರಸ್ತರಿಗೆಗೆ ಪರಿಹಾರ ಸಾಮಾಗ್ರಿ ಒದಗಿಸಿದ ಅನ್ನದಾನೀಶ್ವರ ಸಂಸ್ಥಾನ ಮಠ
ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳು ಪ್ರವಾಹದಿಂದ ಮುಳಗಡೆಯಾಗಿದ್ದು, ನಿರಾಶ್ರಿತರಾದ ಗ್ರಾಮಸ್ಥರಿಗೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠ ಪರಿಹಾರ ಸಾಮಾಗ್ರಿಗಳನ್ನ ಒದಗಿಸಿದೆ.
ಶ್ರೀ ಮಠದಲ್ಲಿ ದಿನನಿತ್ಯ ನಡೆಯುತ್ತಿರುವ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಸಂಘಟಕರು ಪರಿಹಾರ ಕಾರ್ಯದ ಕುರಿತು ಕರೆ ನೀಡಿದ್ದಾರೆ. ತಕ್ಷಣ ಮಠದ ಭಕ್ತರು ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳನ್ನು ಮಠಕ್ಕೆ ತಂದು ಒಪ್ಪಿಸೋ ಮೂಲಕ ನಿರಾಶ್ರಿತರ ಆಸರೆಗೆ ನಮ್ಮದು ಒಂದು ಸೇವೆ ಇರಲಿ ಅಂತ ಕೈ ಜೋಡಿಸಿದ್ದಾರೆ. ಮಠದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ, ಭಕ್ತರ ಸಮೇತ ನರಗುಂದಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರಿಗೆ ಪರಿಹಾರದ ಸಾಮಗ್ರಿಗಳನ್ನು ವಿತರಿಸಿದರು.
ಶ್ರೀಮಠದಿಂದ 1 ಲಕ್ಷ ರೂಪಾಯಿ ಹಾಗೂ ವಿದ್ಯಾ ಸಂಸ್ಥೆಯಿಂದ 50 ಸಾವಿರ ಮತ್ತು ಭಕ್ತರ ಸಹಕಾರದೊಂದಿಗೆ ಐವತ್ತುಸಾವಿರ ಹೀಗೆ ಒಟ್ಟು 2 ಲಕ್ಷ ರೂಗಳ ಚೆಕ್ಕನ್ನು ನರಗುಂದ ತಹಸೀಲ್ದಾರರಿಗೆ ನೀಡಲಾಗಿದ್ದು, ಇದರ ಜೊತೆ 2000 ಸಾವಿರ ರೊಟ್ಟಿ, 300 ಸೀರೆ, 200 ಚಾದರ ಸೇರಿದಂತೆ ಬಟ್ಟೆ, ಬಕೆಟ್ಗಳನ್ನು ನೆರೆಸಂತ್ರಸ್ತರಿಗೆ ವಿತರಿಸಿದ್ರು.