ಗದಗ:ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿದು ಬಿದ್ದಿದೆ. ಅಗಸ್ತ್ಯ ಮುನಿಗಳು ತಪಸ್ಸು ಮಾಡಿರುವ ಪವಿತ್ರ ಸ್ಥಳವೂ ಇದಾಗಿದ್ದು, ಸತತವಾಗಿ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಘಟನೆ ನಡೆದಿದೆ. ದೇವಸ್ಥಾನದ ಒಳಗಡೆಯೂ ನೀರು ನುಗ್ಗಿವೆ. ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಹಾಗೂ ಮುಖ್ಯಾಧಿಕಾರಿ ಹುಲ್ಲಮ್ಮನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿತ - Etv Bharat Kannada
ನಿರಂತರ ಸುರಿದ ಮಳೆಯಿಂದಾಗಿ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿದಿದೆ.
ಅಗಸ್ತ್ಯ ತೀರ್ಥ ದೇವಸ್ಥಾನ ಗೋಡೆ ಕುಸಿತ