ಕರ್ನಾಟಕ

karnataka

ETV Bharat / state

ಸಮಯಕ್ಕೆ ಸರಿಯಾಗಿ ಬಾರದ ಬಸ್: ಟ್ರ್ಯಾಕ್ಟರ್ ಏರಿದ ಬಾಲಕಿ ಆಯತಪ್ಪಿ ಬಿದ್ದು ಸಾವು‌ - ಟ್ರ್ಯಾಕ್ಟರ್ ಮೇಲಿಂದ ಬಿದ್ದು ಬಾಲಕಿ ಸಾವು

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಟ್ರ್ಯಾಕ್ಟರ್​​ನಿಂದ ಬಿದ್ದು ಹತ್ತು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

girl died after fell down from tractor
ಟ್ರ್ಯಾಕ್ಟರ್​​ನಿಂದ ಆಯತಪ್ಪಿ ಬಿದ್ದು ಬಾಲಕಿ ಸಾವು

By

Published : Dec 3, 2021, 4:09 PM IST

Updated : Dec 3, 2021, 4:16 PM IST

ಗದಗ:ಟ್ರ್ಯಾಕ್ಟರ್​ನಲ್ಲಿ ತೆರಳುತ್ತಿದ್ದ ​ಶಾಲಾ ಬಾಲಕಿಯೊಬ್ಬಳು ಆಯತಪ್ಪಿ ಮೇಲಿಂದ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.

ಟ್ರ್ಯಾಕ್ಟರ್​​ನಿಂದ ಆಯತಪ್ಪಿ ಬಿದ್ದು ಬಾಲಕಿ ಸಾವು

ಶೋಭಾ ಹಂಗನಕಟ್ಟಿ (10) ಮೃತ ಬಾಲಕಿ ಎಂದು ತಿಳಿದು ಬಂದಿದೆ. ಬಸ್ ಬಾರದ ಹಿನ್ನೆಲೆಯಲ್ಲಿ ಬಾಲಕಿ ಶೋಭಾ ಹೊಸಳ್ಳಿಯಿಂದ ಕಡಕೋಳ ಸರ್ಕಾರಿ ಶಾಲೆಗೆ ಟ್ರ್ಯಾಕ್ಟರ್​ ಏರಿ ಹೊರಟಿದ್ದಳು. ಮಾರ್ಗ ಮಧ್ಯೆ ತಿರುವಿನಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದ ಪರಿಣಾಮ ಶೋಭಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ.

ಮೃತ ಬಾಲಕಿ

ಇನ್ನು ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸದ ಸಾರಿಗೆ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಮೃತ ಸಂಬಂಧಿಕರು ಆರೋಪಿಸಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ನೇಣು ಬಿಗಿದುಕೊಂಡು ಫೈನಾನ್ಸಿಯರ್ ಆತ್ಮಹತ್ಯೆ : ಸ್ಥಳದಲ್ಲಿ ಡೆತ್​ನೋಟ್​​​ ಪತ್ತೆ

Last Updated : Dec 3, 2021, 4:16 PM IST

ABOUT THE AUTHOR

...view details