ಹುಬ್ಬಳ್ಳಿ: ಯುವಕನೊಬ್ಬ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ನಡೆದಿದೆ. ಇಲ್ಲಿನ ಇಂಡಿ ಪಂಪ್ ಸರ್ಕಲ್ ಬಳಿಯ ಬಿರಿಯಾನಿ ಹೌಸ್ ಶಾಪ್ ಮಾಲೀಕ ಮತ್ತು ರಾಘವೇಂದ್ರ ಎಂಬ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಇವರ ಜಗಳ ಅತಿರೇಕಕ್ಕೇರಿದೆ. ಹೀಗಾಗಿ ಬಿರಿಯಾನಿ ಹೌಸ್ ಮಾಲೀಕನು ರಾಘವೇಂದ್ರನನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಪೊಲೀಸರೆದುರೇ ಕತ್ತು ಕೊಯ್ದುಕೊಂಡ ಯುವಕ.. ಆಸ್ಪತ್ರೆಗೆ ದಾಖಲಿಸಿದ ಹೋಟೆಲ್ ಮಾಲೀಕ - ಬಿರಿಯಾನಿ ಹೌಸ್ ಶಾಪ್ ಮಾಲೀಕ
ಯುವಕನೊಬ್ಬ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರೆದುರೇ ಕತ್ತು ಕೊಯ್ದುಕೊಂಡ ಯುವಕ
ಠಾಣೆಯಲ್ಲಿ ಪೊಲೀಸರು ಬಿರಿಯಾನಿ ಹೌಸ್ ಮಾಲೀಕನನ್ನು ಹಾಗೂ ರಾಘವೇಂದ್ರನನ್ನು ವಿಚಾರಣೆ ಮಾಡುತ್ತಿದ್ದರು. ಈ ವೇಳೆ, ರಾಘವೇಂದ್ರ ಪೊಲೀಸರ ಮುಂದೆಯೇ ಬ್ಲೇಡ್ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಗಾಯಗೊಂಡ ಯುವಕನನ್ನು ಹೊಟೇಲ್ ಮಾಲೀಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.
ಓದಿ:ಗಣಪತಿ ನಿಮಜ್ಜನ ವೇಳೆ ಚಾಕು ಇರಿತ ವದಂತಿ: ರಾಣೆಬೆನ್ನೂರಿನಲ್ಲಿ ಆತಂಕ ಸೃಷ್ಟಿ