ಧಾರವಾಡ :ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಇಂದು ಕೂಡ ಮುಂದುವರೆದಿದೆ. ಯೋಗೀಶ್ಗೌಡ ಪತ್ನಿ ಮಲ್ಲಮ್ಮ ಹಾಗೂ ಜಿಪಂ ಉಪಾಧ್ಯಕ್ಷರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಯೋಗೀಶ್ಗೌಡ ಕೊಲೆ ಕೇಸ್... ಸಿಬಿಐನಿಂದ ಮುಂದುವರಿದ ವಿಚಾರಣೆ - ಯೋಗೀಶ್ ಗೌಡ ಪತ್ನಿ ಮಲ್ಲಮ್ಮ
ವಿಚಾರಣೆ ಮುಗಿಸಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಮ್ಮ, ವಿಚಾರಣೆ ಕುರಿತಾಗಿ ವದಂತಿಗಳು ಬೇಡ ಎಂದರು..
ನಿನ್ನೆ ಇಡೀ ದಿನ ನಡೆದಿದ್ದ ವಿಚಾರಣೆ ಇಂದುಅಧಿಕಾರಿಗಳಿಂದ ಅರ್ಧ ದಿನ ಮಾತ್ರ ನಡೀತು. ಮೃತ ಯೋಗೀಶ್ಗೌಡನ ಸಹೋದರ ಗುರುನಾಥ ಗೌಡ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಸಿಕೊಂಡಿದ್ದು, ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ವಿಚಾರಣೆ ಮುಗಿಸಿ ಕಚೇರಿಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಮ್ಮ, ವಿಚಾರಣೆ ಕುರಿತಾಗಿ ವದಂತಿಗಳು ಬೇಡ ಎಂದರು.
ಅವರ ಬಳಿಕ ಹೊರಬಂದ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಲ್ಲಮ್ಮ ಅವರನ್ನು ಕಾಂಗ್ರೆಸ್ ಸೇರ್ಪಡೆಗೊಳಿಸಲು ಮಾತ್ರ ಭೇಟಿ ಮಾಡಿಸಿದ್ದೆ. ನಿನ್ನೆ ಸಮಯ ಇರದ ಕಾರಣ ಇವತ್ತು ಮತ್ತೆ ಅಧಿಕಾರಿಗಳು ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದರು.