ಕರ್ನಾಟಕ

karnataka

ETV Bharat / state

ಪೆಟ್ರೋಲ್ ಬಂಕ್​ನಲ್ಲಿ ಪೆಟ್ರೋಲ್​ ಬದಲು ಬಂತು ನೀರು... ಇನ್ಮುಂದೆ ನೀವೂ ಹುಷಾರು - kannadanews

ಹುಬ್ಬಳ್ಳಿ ನಗರದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಗಿಂತ ಹೆಚ್ಚು ನೀರೇ ಬರುತ್ತಿದೆ ಎಂದು ಗ್ರಾಹಕರು ಆರೋಪ ಮಾಡಿದ್ದಾರೆ.

ಪೆಟ್ರೋಲ್ ಬಂಕ್​ ನಲ್ಲಿ ಪೆಟ್ರೋಲ್ ಬದಲಾಗಿ ನೀರು

By

Published : Jul 2, 2019, 10:19 AM IST

Updated : Jul 2, 2019, 11:48 AM IST

ಹುಬ್ಬಳ್ಳಿ: ಹುಬ್ಬಳ್ಳಿ- ನವಲಗುಂದ ರಸ್ತೆಯಲ್ಲಿರುವ ಆಕ್ಸ್​ಫರ್ಡ್​ ಕಾಲೇಜು ಬಳಿ ಇರುವ ಬಾಲಾಜಿ ಪೆಟ್ರೋಲ್ ಬಂಕ್​ ನಲ್ಲಿ ಪೆಟ್ರೋಲ್ ಬದಲಾಗಿ ನೀರು ಬರುತ್ತಿದೆ. ಹೀಗಾಗಿ ಗ್ರಾಹಕರು ಪೆಟ್ರೋಲ್ ಬಂಕ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

ಪೆಟ್ರೋಲ್ ಬಂಕ್​ ನಲ್ಲಿ ಪೆಟ್ರೋಲ್ ಬದಲಾಗಿ ನೀರು

ಯುವಕನೊಬ್ಬ ಬಂಕ್ ಗೆ ಬಂದು ಪೆಟ್ರೋಲ್ ಹಾಕಿಸಿಕೊಂಡು 1 ಕಿಲೋಮೀಟರ್ ದೂರ ಹೋಗಿದ್ದಾನೆ. ಅಷ್ಟಕ್ಕೆ ಬೈಕ್ ನಿಂತಿದೆ. ಹೀಗಾಗಿ ಮತ್ತೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಗೆ ಬಂದಿದ್ದಾನೆ. ಆಗ ತನ್ನ ಬೈಕ್ ನಲ್ಲಿರುವ ಪೆಟ್ರೋಲ್ ಬಾಟಲಿಯೊಂದಕ್ಕೆ ತೆಗೆದಿದ್ದಾನೆ ಆಗ ಬಾಟಲಿಯಲ್ಲಿ ಪೆಟ್ರೋಲ್ ಬದಲಾಗಿ ನೀರು ಬಂದಿದೆ. ನಂತರ ಪೆಟ್ರೋಲ್ ಬಂಕ್​ ಸಿಬ್ಬಂದಿಯಿಂದ ಬೇರೆ ಬಾಟಲಿಗೆ ಪೆಟ್ರೋಲ್ ಪಂಪ್ ನಿಂದಾ ಪೆಟ್ರೋಲ್ ಹಾಕಿಸಿದಾಗ ಬಂಕ್ ನಲ್ಲಿ ಪೆಟ್ರೋಲ್ ಬದಲಿಗೆ ನೀರು ಬರುತ್ತಿರುವುದು ಬಯಲಾಗಿದೆ.ಯುವಕ ಹಾಗೂ ಸ್ಥಳೀಯರು ಸೇರಿಕೊಂಡು ಬಂಕ್ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಆಗ ಬಂಕ್ ಸಿಬ್ಬಂದಿ ಏನೇನೋ ಸಬೂಬು ಹೇಳಿ ಕೇವಲ 2 ವಾಹನಗಳಿಗೆ ಮಾತ್ರವೇ ಪೆಟ್ರೋಲ್ ಹಾಕಿದ್ದೀವಿ ಅಂತಾ ಉಡಾಫೆ ಉತ್ತರ ಕೊಟ್ಟಿದ್ದಾರೆ. ಈ ಬಂಕ್ ಸಿಬ್ಬಂದಿಯ ಮೋಸದಾಟಕ್ಕೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ಜೊತೆಗೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನೂ ಬಂಕ್ ನಲ್ಲಿ ಪೆಟ್ರೋಲ್ ಬದಲು ನೀರು ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಬಂಕ್ ಮಾಲೀಕ ಶೇಖರ್ ವಡ್ಡಟ್ಟಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗಿದೆ. ಇದರ ಪರಿಣಾಮ ಬಂಕ್ ಟ್ಯಾಂಕ್ ನೊಳಗೆ ನೀರು ತುಂಬಿಕೊಂಡು ಈ ರೀತಿಯಾಗಿದೆ. ಉದ್ದೇಶಪೂರ್ವಕವಾಗಿ ಗ್ರಾಹಕರಿಗೆ ಪೆಟ್ರೋಲ್ ಬದಲು ನೀರು ಹಾಕಿಲ್ಲ. ನಿನ್ನೆ ಬೆಳಗ್ಗೆಯಿಂದಲೂ ಬಂಕ್ ರಿಪೇರಿ ಮಾಡಿ, ನೀರು ಹೊರ ತಗೆದಿದ್ದೇವೆ.‌ಕೇವಲ ಎರಡ್ಮೂರು ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕಿದ್ದು ಈ ರೀತಿಯಾದ ಮೇಲೆ ಪೆಟ್ರೋಲ್ ಹಾಕುವುದನ್ನು ನಿಲ್ಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Last Updated : Jul 2, 2019, 11:48 AM IST

ABOUT THE AUTHOR

...view details