ಹುಬ್ಬಳ್ಳಿ :ರೈಲ್ವೆ ನಿಲ್ದಾಣ ಹಾಗೂ ನಿಂತಿರುವ ರೈಲಿನಲ್ಲಿ ನಡೆಯುತ್ತಿದ್ದ ಕ್ರೈಂಗಳಿಗೆ ಕಡಿವಾಣ ಹಾಕಲು ನೈಋತ್ಯ ರೈಲ್ವೆ ವಲಯ ಹೊಸ ನಿರ್ಧಾರ ಕೈಗೊಂಡಿದೆ. ಈ ವಿಡಿಯೋ ಸರ್ವಿಲೆನ್ಸ್ ಸಿಸ್ಟಮ್ಗಳನ್ನು ನಿಲ್ದಾಣದಲ್ಲಿ ಅಳವಡಿಸಲು ಮುಂದಾಗಿದೆ.
ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಲ ಪಡಿಸುವ ಉದ್ದೇಶದಿಂದ ವಿಡಿಯೋ ಸರ್ವಿಲೆನ್ಸ್ ಸಿಸ್ಟಮ್ (ವಿಎಸ್ಎಸ್ ತೀವ್ರ ನಿಗಾ ವ್ಯವಸ್ಥೆ) ವ್ಯವಸ್ಥೆ ಜಾರಿಗೊಳಿಸಿದೆ. ಇಂಟರ್ನೆಟ್ ಪ್ರೋಟೋಕಾಲ್ ಆಧಾರಿತ ವಿಡಿಯೋ ಸರ್ವಿಲಿಯನ್ಸ್ ಸಿಸ್ಟಮ್ ಅಳವಡಿಸಿದ್ದು, ನೈಋತ್ಯ ವಲಯದ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ನೀಡಲು ಈ ಯೋಜನೆ ಜಾರಿಗೊಳಿಸಿದೆ.