ಧಾರವಾಡ: ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ರದ್ದಾಗಿದ್ದ ಕೃಷಿ ಮೇಳ ಇಂದಿನಿಂದ ಮತ್ತೆ ಆರಂಭವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದಲ್ಲಿ ರೈತರ ಜಾತ್ರೆಗೆ ಕ್ಷಣಗಣನೇ ಶುರುವಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಕೃಷಿಮೇಳ ನಡೆಸಲು ಆಗಿರಲಿಲ್ಲಾ ಆದ್ರೆ ಈ ವರ್ಷ ಧಾರವಾಡದ ಕೃಷಿ ವಿವಿಯಲ್ಲಿ ಕೃಷಿ ಮೇಳ ಪುನಾರಂಭವಾಗಿದೆ. ಹೊಸ ತಳಿಗಳು ಹಾಗೂ ಬೀಜಗಳ ಪ್ರದರ್ಶನದ ಸೆರಿದಂತೆ ತಂತ್ರಜ್ಞಾನ ಪರಿಚಯ ಕೂಡ ಮೇಳದಲ್ಲಿ ರೈತರಿಗೆ ಸಿಗಲಿದೆ. 3 ದಿನಗಳ ಕಾಲ ನಡೆಯುವ ಮೇಳದಲ್ಲಿ 13ಕ್ಕೂ ಹೆಚ್ಚು ಜಿಲ್ಲೆಗಳ ರೈತರು ಆಗಮಿಸುವ ಸಾಧ್ಯತೆಯಿದೆ.
ನಾಳೆ ಅಧಿಕೃತವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೃಷಿ ಮೇಳ ಉದ್ಘಾಟಿಸಲಿದ್ದಾರೆ. ಇಂದು ಬೀಜಗಳ ಮೇಳದ ಜೊತೆಗೆ ಆಧುನಿಕ ಕೃಷಿ ತಂತ್ರಜ್ಞಾನ ಸಹ ಪ್ರದರ್ಶನವಾಗಲಿದೆ. ಎರಡು ವರ್ಷಗಳಿಂದ ರದ್ದಾಗಿದ್ದ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಅಗಮಿಸುವ ನಿರೀಕ್ಷೆಯಿದೆ.
ಮೇಳಕ್ಕೆ ಸುಮಾರು 12 ಲಕ್ಷ ಜನರ ಸೇರಬಹುದು ಎಂದು ನಿರೀಕ್ಷಿಸಲಾಗಿದೆ. ಮೇಳದಲ್ಲಿ 700 ಕ್ಕೂ ಹೆಚ್ಚು ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸಾಧಕ ರೈತರಿಗಾಗಿ ಹೆಚ್ಚಿನ ಮಳಿಗೆಗಳನ್ನು ಮೀಸಲಿರಿಸಲಾಗಿದೆ. ರೈತರ ಆಧಾಯ ದ್ವಿಗುಣಗೊಳಿಸುವ ಕೃಷಿ ತಾಂತ್ರಿಕತೆಗಳು ಘೋಷವಾಕ್ಯದಲ್ಲಿ ಮೇಳ ಆಯೋಜನೆ ಮಾಡಲಾಗಿದೆ. ಇನ್ನು, ಮೇಳದಲ್ಲಿ ಫಲ ಪುಷ್ಪ, ಗೆಡ್ಡೆ ಗೆಣಸು, ವಿಸ್ಮಯಕಾರಿ ಕೀಟಗಳ ಪ್ರದರ್ಶನ ಆಕರ್ಷಣೆಯಾಗಲಿವೆ. ರೈತರಿಗೆ ಕೃಷಿ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಲಾಗುವುದು ನಾಲ್ಕು ದಿನ ಕೃಷಿ ಸಂಬಂಧಿತ ವಿಚಾರಗೋಷ್ಠಿಗಳನ್ನು ಆಯೊಜನೆ ಮಾಡಲಾಗಿದೆ.
ಇದನ್ನೂ ಓದಿ:ಗುಜರಾತ್ನಲ್ಲಿ ಪ್ರವಾಸೋದ್ಯಮ ಮೇಳ: ಗಮನ ಸೆಳೆದ ರಾಮೋಜಿ ಫಿಲ್ಮ್ ಸಿಟಿ ಸ್ಟಾಲ್