ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ರೈತ ನಾಯಕರು... ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯ - ಉತ್ತರ ಕರ್ನಾಟಕದಲ್ಲಿ ಮಳೆ, ಪ್ರವಾಹ

ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಕುರುಬೂರು ಶಾಂತಕುಮಾರ್​, ರಾಜ್ಯದ 28 ಲೋಕಸಭಾ ಸದಸ್ಯರಲ್ಲಿ 26 ಲೋಕಾಸಭೆ ಸದಸ್ಯರನ್ನು ಕೇಂದ್ರದಲ್ಲಿ ಆಡಳಿತ ಮಾಡಲು ರಾಜ್ಯ ಆಯ್ಕೆ ಮಾಡಿ‌ ಕಳಿಸಿದೆ. ಆದರೂ ಸಂತ್ರಸ್ತರ ಪರಿಹಾರಕ್ಕೆ ಒತ್ತಡ ತರುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿ

By

Published : Aug 16, 2019, 1:31 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಳೆ, ಪ್ರವಾಹ ಹಾನಿಯಾಗಿದ್ದು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಿತ್ತು. ಅದನ್ನು ಬಿಟ್ಟು ವಿಳಂಬ ನೀತಿ‌ ಅನುಸರಿಸುತ್ತಿದೆ. ಕೂಡಲೇ ರಾಜ್ಯದ ಎಲ್ಲ ಲೋಕಸಭೆ ಸದಸ್ಯರು ಪ್ರಧಾನಿ ಕಡೆಗೆ ಆಯೋಗ ತೆಗೆದುಕೊಂಡು ಹೋಗಿ ಹೆಚ್ಚಿನ ಪರಿಹಾರ ಒದಗಿಸುವ‌‌ ಕೆಲಸ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 28 ಲೋಕಸಭಾ ಸದಸ್ಯರಲ್ಲಿ 26 ಲೋಕಾಸಭೆ ಸದಸ್ಯರನ್ನು ಕೇಂದ್ರದಲ್ಲಿ ಆಡಳಿತ ಮಾಡಲು ರಾಜ್ಯ ಆಯ್ಕೆ ಮಾಡಿ‌ ಕಳಿಸಿದೆ. ಆದರೆ ಈ 26 ಲೋಕಸಭೆ ಸದಸ್ಯರು ರಾಜ್ಯದಲ್ಲಿ ಆದ ನೆರೆ ಹಾವಳಿ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಈವರೆಗೆ ಮಾಡಿಲ್ಲ. ಕೂಡಲೇ ಎಲ್ಲ ಲೋಕಸಭಾ ಸದಸ್ಯರು ಕೂಡಿ ರಾಜ್ಯದಲ್ಲಿ ಆದ ಪ್ರವಾಹದ ಬಗ್ಗೆ ವಿಸ್ತೃತ ವರದಿ ತಯಾರಿಸಿಕೊಂಡು ಪ್ರಧಾನಿ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪ್ರವಾಹದ ಬಗ್ಗೆ ವಿಸ್ತರಣೆ ನೀಡಬೇಕು. ಅಲ್ಲದೇ ರಾಜ್ಯದಲ್ಲಾದ ಹಾನಿಯ ಪ್ರಮಾಣ ಸುಮಾರು 50 ಸಾವಿರ ಕೋಟಿ ರೂ‌ಗಳಲ್ಲಿ 20 ಸಾವಿರ ಕೋಟಿ ರೂಗಳ‌ ಪರಿಹಾರ ಕೊಡಿಸುವಂತಹ ಕೆಲಸ ಮಾಡಬೇಕು. ಈ ಮೂಲಕ‌ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.

ಪತ್ರಿಕಾಗೋಷ್ಠಿ

ಅಲ್ಲದೇ, ಮಳೆ, ಪ್ರವಾಹದಿಂದಾಗಿ ಸಾವಿರಾರು ಕುಟುಂಬಗಳು ಮನೆ - ಮಠ, ಆಸ್ತಿ - ಪಾಸ್ತಿ, ಜಾನುವಾರುಗಳನ್ನು ಕಳೆದುಕೊಂಡಿವೆ. ಅಂತಹ ಕುಟುಂಬಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಇದರಿಂದ ಅಧಿಕಾರಿಗಳು ಪರಿಹಾರ ಒದಗಿಸಲು ಆಸ್ತಿಯ‌ ಪಹಣಿ, ರೇಷನ್ ಕಾರ್ಡ್, ಆಧಾರ ಕಾರ್ಡ್ ಸೇರಿದಂತೆ ಇನ್ನಿತರ ದಾಖಲಾತಿ ಕೇಳುತ್ತಿದ್ದಾರೆ. ಇದು ಖಂಡನೀಯವಾಗಿದೆ, ಏಕೆಂದರೆ ಮಳೆ ಪ್ರವಾಹದಿಂದ ಮನೆಯಲ್ಲಿದ್ದ ದಾಖಲಾತಿಗಳು ನೀರಿನಲ್ಲಿ ನಾಶವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಅಗತ್ಯ ದಾಖಲಾತಿ ಒದಗಿಸಬೇಕೆಂದರೆ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕೂಡಲೇ ಆಯಾ ಕ್ಚೇತ್ರದ ತಾಲೂಕು ಮಟ್ಟದ ತಹಶಿಲ್ದಾರರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಿ ಸ್ಥಳ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ವಿಶೇಷವಾದ ಗುರುತು ಪತ್ರಗಳನ್ನು ವಿತರಣೆ ಮಾಡಬೇಕು. ಇದರ ಮೂಲಕ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದರು. ಪ್ರವಾಹ ಹಾನಿಗೆ ರಾಜ್ಯ ಸರ್ಕಾರ ಭಾಗಿಯಾಗಬೇಕು ಅಲ್ಲದೇ ಪ್ರವಾಹದಿಂದ ರೈತ ಮುಂದಿನ ಹತ್ತು ವರ್ಷಗಳಾದರೂ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಸ್ಥಳಗಳ ರೈತರ ಕೃಷಿ ಸಂಬಂಧಿಸಿದ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸುರೇಶ ಪಾಟೀಲ್, ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಸುರೇಶ ಹಲವಾಗಲಿ, ಈರಣ್ಣಾ, ಮಾರುತಿ ಹಾಜರಿದ್ದರು.

ABOUT THE AUTHOR

...view details