ಹುಬ್ಬಳ್ಳಿ:ಅಡುಗೆ ಸರಿಮಾಡಿಲ್ಲವೆಂದು ತನ್ನ ಎರಡನೇ ಪತ್ನಿಯನ್ನ ಪತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಅಡಿಗೆ ಸರಿಯಿಲ್ಲವೆಂದು ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಕಟುಕ ಗಂಡ
ಅಡಿಗೆ ಸರಿಮಾಡಿಲ್ಲವೆಂದು ತನ್ನ ಎರಡನೇ ಪತ್ನಿಯನ್ನ ಪತಿಯೊಬ್ಬ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ನಡೆದಿದೆ.
ಅಡಿಗೆ ಸರಿಯಿಲ್ಲವೆಂದು ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಕಟುಕ ಗಂಡ
ಗಂಜಿಗಟ್ಟಿ ಗ್ರಾಮದ ನಿವಾಸಿ ರಾಜೇಸಾಬ್ ಕೊಲೆ ಮಾಡಿದ ಆರೋಪಿ, ಹಸೀನಾ ಬಾನು (28) ಗಂಡನ ಕ್ರೌರ್ಯಕ್ಕೆ ಬಲಿಯಾದ ಪತ್ನಿ. ಮೊದಲ ಪತ್ನಿಗೆ ಮಕ್ಕಳಾಗಿಲ್ಲವೆಂದು ಇತ್ತೀಚಿಗಷ್ಟೆ ರಾಜೇಸಾಬ್ ಎರಡನೇ ಮದುವೆ ಮಾಡಿಕೊಂಡಿದ್ದು ಇದೀಗ ಈ ದುರ್ಘಟನೆ ನಡೆದಿದೆ.
ಹಸೀನಾ ಬಾನುವಿಗೆ ಅಡುಗೆ ಮಡೋಕೆ ಬರೋದಿಲ್ಲವೆಂದು ರಾಜೇಸಾಬ್ ಆಗಾಗ ಜಗಳ ತಗೆಯುತ್ತಿದ್ದು, ನಿನ್ನೆ ರಾತ್ರಿ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.