ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಗೆ ಮತ್ತೊಂದು ಗರಿ:  ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಕಿಡ್ನಿ ತೆಗೆದು ಇನ್ನೊಬ್ಬ ರೋಗಿಗೆ ಯಶಸ್ವಿ ಕಸಿ - transplant of a kidney

ಮೊದಲ ಬಾರಿಗೆ ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೊರತಗೆದ ಕಿಡ್ನಿಯನ್ನು ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್​ ಮೇಲಿದ್ದ ರೋಗಿಯೊಬ್ಬನಿಗೆ ಈಗಾಗಲೇ ಕಸಿ ಮಾಡಿದ್ದು, ಮೂತ್ರಪಿಂಡ ಸಹಜವಾಗಿಯೇ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಬ್ರೈನ್​ಡೆಡ್ ಆದ ವ್ಯಕ್ತಿಯಿಂದ ಕಿಡ್ನಿ ತೆಗೆದು ರೋಗಿಗೆ ಯಶಸ್ವಿ ಕಸಿ

By

Published : Sep 26, 2019, 5:36 PM IST

ಹುಬ್ಬಳ್ಳಿ:ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ತೆಗೆದ ಕಿಡ್ನಿಯನ್ನು ಪ್ರಪ್ರಥಮವಾಗಿ ರೋಗಿಯೊಬ್ಬನಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ನಗರದ ತತ್ವದರ್ಶ ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ ಎಂದು ಡಾ. ವೆಂಕಟೇಶ ಮೊಗೇರ ತಿಳಿಸಿದರು.

ಬ್ರೈನ್​ಡೆಡ್ ಆದ ವ್ಯಕ್ತಿಯಿಂದ ಕಿಡ್ನಿ ತೆಗೆದು ರೋಗಿಗೆ ಯಶಸ್ವಿ ಕಸಿ

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಶಸ್ವಿಯಾಗಿ ಕಿಡ್ನಿ ಕಸಿ ಮಾಡುವ ಮೂಲಕ ಆಸ್ಪತ್ರೆಗೆ ಹೊಸ ಆಯಾಮವನ್ನು ಸೃಷ್ಟಿಸಿದ್ದು, ಈ ಹಿಂದೆ ಶಿಶುವಿನ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನೂ ಸಹ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.

ಮೊದಲ ಬಾರಿಗೆ ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೊರತಗೆದ ಕಿಡ್ನಿಯನ್ನು ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್​ ಮೇಲಿದ್ದ ರೋಗಿಯೊಬ್ಬನಿಗೆ ಈಗಾಗಲೇ ಕಸಿ ಮಾಡಿದ್ದು, ಮೂತ್ರಪಿಂಡವು ಸಹಜವಾಗಿಯೇ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವುದಾಗಿ ಆಸ್ಪತ್ರೆಯ ಸಾಧನೆ ಬಗ್ಗೆ ಹೇಳಿಕೊಂಡರು.

ಬೆಳಗಾವಿಯ ಕೆಎಲ್​ಇ ಆಸ್ಪತ್ರೆಯಲ್ಲಿ ಬ್ರೈನ್​ಡೆಡ್ ಆದ ಯೋಗೇಶ ಚೌಗಲಾ ಎಂಬುವವರ ಕಿಡ್ನಿಯನ್ನು ತರಿಸಿಕೊಂಡು ಸ್ಥಳೀಯ ವ್ಯಕ್ತಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಡಾ. ವೆಂಕಟೇಶ ಮೋಗೇರ ನೇತೃತ್ವದಲ್ಲಿ ಯೂರೋಲಾಜಿಸ್ಟ್ ಗಳಾದ ಡಾ.‌ಮಂಜು ಪ್ರಸಾದ, ಡಾ.‌ಭರತ ಕ್ಷತ್ರಿ, ಡಾ. ದಿಲೀಪ ಜವಳಿ, ಅರವಳಿಕೆ ತಜ್ಞ ಡಾ. ಶ್ರೀನಿವಾಸ ಹರಪನಹಳ್ಳಿ ಭಾಗಿಯಾಗಿದ್ದರು ಎಂದು ಮೋಗೆರಾ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details