ಕರ್ನಾಟಕ

karnataka

ETV Bharat / state

ವಿದ್ಯಾರ್ಥಿನಿಯರ ವಿರುದ್ಧ ಅವಾಚ್ಯ ಪದ ಬಳಸಿದ ಪ್ರಾಚಾರ್ಯ: ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ - dharwad principal

ಕಾಲೇಜಿನ ಕೊನೆಯ ದಿನದ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯರ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

Students protest against principal for abusing students in viral video
ವಿದ್ಯಾರ್ಥಿನಿಯರ ವಿರುದ್ಧ ಅವಾಚ್ಯ ಪದ ಬಳಸಿದ ಪ್ರಾಚಾರ್ಯ..ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

By

Published : Oct 5, 2021, 8:57 AM IST

ಧಾರವಾಡ: ಕಾಲೇಜು ವಿದ್ಯಾರ್ಥಿನಿಯರ ಕುರಿತು ಅವಾಚ್ಯ ಪದ ಪ್ರಯೋಗಿಸಿದ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಬಿ.ಪಾಟೀಲ್ ವಿರುದ್ಧ ವಿದ್ಯಾರ್ಥಿಗಳು ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿನ್ನೆ ಕಾಲೇಜಿನ ಕೊನೆಯ ದಿನದ ಸಂಭ್ರಮದಲ್ಲಿದ್ದರು. ಬಣ್ಣ ಎರಚಿ, ಪರಸ್ಪರ ಆಟೋಗ್ರಾಫ್ ಪಡೆದುಕೊಂಡು ಸಂಭ್ರಮಿಸುವ ವೇಳೆ ಇದನ್ನು ನೋಡುತ್ತಿದ್ದ ಪ್ರಾಚಾರ್ಯ ಅವಾಚ್ಯ ಪದ ಪ್ರಯೋಗಿಸಿದ್ದಾರೆ.

ವಿದ್ಯಾರ್ಥಿನಿಯರ ವಿರುದ್ಧ ಅವಾಚ್ಯ ಪದ ಬಳಸಿದ ಪ್ರಾಚಾರ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಈ ವೇಳೆ ಪ್ರಾಚಾರ್ಯರ ಪಕ್ಕದಲ್ಲಿದ್ದ ವ್ಯಕ್ತಿ ವಿಡಿಯೋ ಮಾಡಿದ್ದು, ಪ್ರಾಚಾರ್ಯರ ಮಾತುಗಳು ದಾಖಲಾಗಿವೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:'ಸಿನಿಮೀಯ ಸ್ಟೈಲ್'ನಲ್ಲಿ ಬ್ಯಾಂಕ್​ ದರೋಡೆ.. ಕಳ್ಳರ ಕೈಚೆಳಕ ಸಿಸಿಟಿವಿಯಲ್ಲಿ ಸೆರೆ..

ABOUT THE AUTHOR

...view details