ಹುಬ್ಬಳ್ಳಿ :ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯ ಶಶಿಕಾಂತ ಸಿದ್ನಾಳ ಫುಡ್ಸ್ ಪ್ರೈ. ಲಿ. ಕಂಪನಿಯವರು ಈವರೆಗೆ 70 ಸಾವಿರಕ್ಕೂ ಅಧಿಕ ಪಾರ್ಲೆ-ಜಿ ಬಿಸ್ಕತ್ ಪ್ಯಾಕ್ಗಳನ್ನು ವಿತರಿಸುವ ಮೂಲಕ ಹಸಿದವರಿಗೆ ನೆರವಾಗಿದ್ದಾರೆ.
ಹಸಿದವರಿಗೆ ಆಸರೆಯಾದ ಎಸ್ ಎಸ್ ಪ್ರೈ.ಲಿ.. 70 ಸಾವಿರ ಪಾರ್ಲೆ-ಜಿ ಪ್ಯಾಕ್ ವಿತರಣೆ !!
ಶಶಿಕಾಂತ ಸಿದ್ನಾಳ ಫುಡ್ಸ್ ಪ್ರೈ. ಲಿ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದಿಗ್ವಿಜಯ ಸಿದ್ನಾಳ ಅವರು ಹುಬ್ಬಳ್ಳಿಯಲ್ಲಿನ ಕಡುಬಡವರಿಗೆ, ನಿರ್ಗತಿಕರಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರವಲ್ಲದೆ ಬೀದಿ ದನಕರುಗಳಿಗೆ ಹಾಗೂ ನಾಯಿಗಳಿಗೆ ಬಿಸ್ಕತ್ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದಿಗ್ವಿಜಯ ಸಿದ್ನಾಳ ಅವರು ಹುಬ್ಬಳ್ಳಿಯಲ್ಲಿನ ಕಡುಬಡವರಿಗೆ, ನಿರ್ಗತಿಕರಿಗೆ, ಪೊಲೀಸ್ ಸಿಬ್ಬಂದಿಗೆ ಮಾತ್ರವಲ್ಲದೆ ಬೀದಿ ದನಕರುಗಳಿಗೆ ಹಾಗೂ ನಾಯಿಗಳಿಗೆ ಬಿಸ್ಕೆತ್ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ, ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್, ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ, ಶಾಸಕಿ ಕುಸುಮಾವತಿ ಶಿವಳ್ಳಿ, ಪ್ರಸಾದ್ ಅಬ್ಬಯ್ಯರ ಮೂಲಕ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಡವರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಎಸ್ ಎಸ್ ಶೆಟ್ಟರ ಫೌಂಡೇಶನ್ನವರು ಬಿಸ್ಕತ್ಗಳನ್ನು ವಿತರಿಸಿದ್ದಾರೆ.