ಕರ್ನಾಟಕ

karnataka

By

Published : Nov 2, 2020, 4:06 PM IST

ETV Bharat / state

ಟೆಂಡರ್ ಗೊಂದಲ...ಅವಳಿ ನಗರದಲ್ಲಿ ಹಳ್ಳ ಹಿಡಿಯುತ್ತಿದೆಯಾ ಸ್ಮಾರ್ಟ್ ಸಿಟಿ ಯೋಜನೆ !

ಹುಬ್ಬಳ್ಳಿ - ಧಾರವಾಡ ಸ್ಮಾಟ್೯ ಸಿಟಿ ಯೋಜನೆ ಹಳ್ಳ ಹಿಡಿದಿದೆ. ಸದ್ಯ ಸ್ಮಾರ್ಟ್​​ ಸಿಟಿ ಸೋಲಾರ್​​ ಯೋಜನೆಯ ಟೆಂಡರ್ ಕರೆದ್ರೂ ಯಾರು ಮುಂದೆ ಬರದೇ ಇರೋದು ಇಲಾಖೆಯಲ್ಲಿ ಗೊಂದಲ ಸೃಷ್ಟಿಸಿದೆ.

hubli
ಸ್ಮಾಟ್೯ ಸಿಟಿ ಸೋಲಾರ್​​ ಯೋಜನೆ

ಹುಬ್ಬಳ್ಳಿ: ಅವಳಿ ನಗರ ಸ್ಮಾಟ್೯ ಸಿಟಿ ಯೋಜನೆಗೆ ಆಯ್ಕೆಯಾಗಿ ನಾಲ್ಕೈದು ವರ್ಷಗಳೇ ಕಳೆದಿವೆ. ಆದರೂ ಸ್ಮಾಟ್೯ ಆಗುತ್ತಿಲ್ಲ ಇಲಾಖೆ ಕೈಗೊಂಡಿರೋ ಕಾಮಗಾರಿಗಳು, ಯೋಜನೆಗಳು ಪೂರ್ಣಗೊಳ್ಳುತ್ತಿಲ್ಲ.

ಸ್ಮಾಟ್೯ ಸಿಟಿ ಸೋಲಾರ್​​ ಯೋಜನೆ
ಹುಬ್ಬಳ್ಳಿ-ಧಾರವಾಡ ಸ್ಮಾಟ್೯ ಸಿಟಿ ಯೋಜನೆ ಸದ್ಯ ಹಳ್ಳ ಹಿಡಿದಿದೆ. ಸ್ಮಾಟ್೯ ಸಿಟಿ ಕೈಗೊಂಡಿರೋ ಯಾವುದೇ ಯೋಜನೆಗಳು ನಿರೀಕ್ಷಿತ ಸಮಯದೊಳಗೆ ಕಾಮಗಾರಿ ಮುಗಿಯುತ್ತಿಲ್ಲ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೂ ಹಾನಿ ಮಾಡುವುದಲ್ಲದೇ ಸದ್ಯ ಜನರ ಜೀವಕ್ಕೂ ಕುತ್ತು ತರುತ್ತಿದೆ. ಕಳೆದ ತಿಂಗಳಷ್ಟೆ ಇದೇ ಸ್ಮಾಟ್೯ ಸಿಟಿಯ ಮಳೆ ನೀರು ಕೊಯ್ಲು ಯೋಜನೆಯ ಗುಂಡಿಗೆ ಬಿದ್ದು, 8 ವರ್ಷದ ಬಾಲಕಿ ಮೃತ ಪಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಮಧ್ಯೆ ಸ್ಮಾರ್ಟ್ ಸಿಟಿ ಕಂಪನಿ ಸದ್ಯ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಅನೇಕ ಸರ್ಕಾರಿ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸೋ ಯೋಜನೆ ಕೈಗೊಂಡಿತ್ತು. ಆದ್ರೆ ಸ್ಮಾಟ್೯ ಸಿಟಿ ಯೋಜನೆಯಡಿ ನಾಲ್ಕೈದು ಬಾರಿ ಟೆಂಡರ್ ಕರೆದರೂ ಯಾವುದೇ ಗುತ್ತಿಗೆದಾರು ಟೆಂಡರ್​ನಲ್ಲಿ ಭಾಗವಹಿಸುತ್ತಿಲ್ಲ. ಕಾರಣ ಕೇಳಿದರೆ ಸೋಲಾರ್​​ನಿಂದ ಉತ್ಪತ್ತಿಯಾದ ವಿದ್ಯುತ್ ಕಡಿಮೆ ಬೆಲೆಗೆ ಖರೀದಿ ಮಾಡೋ ಕುರಿತು ಒಪ್ಪಂದ ಮಾಡಿಕೊಳ್ಳುವ ಕರಾರು ಇದೆ.
ಸ್ಮಾಟ್೯ ಸಿಟಿ ಸೋಲಾರ್​​ ಯೋಜನೆ
ಸ್ಮಾಟ್೯ ಸಿಟಿ ಸೋಲಾರ್​​ ಯೋಜನೆ

ಸ್ಮಾಟ್೯ ಸಿಟಿ ಯೋಜನೆ ಪ್ರಕಾರ 3.57 ಪೈಸೆ ಪ್ರತಿ ಯೂನಿಟ್​ಗೆ ಕೊಡಬೇಕು ಎನ್ನೋ ಒಪ್ಪಂದ ಇದೆಯಂತೆ. ಹೀಗಾಗೆ ಸದ್ಯ ಯಾರೂ ಕೂಡ ಟೆಂಡರ್ ಖರೀದಿಗೆ ಮುಂದಾಗುತ್ತಿಲ್ಲ ಹೀಗಾಗಿ ಸ್ಮಾಟ್೯ ಸಿಟಿ ವಿರುದ್ಧ ಸ್ಥಳೀಯ ಇನ್ನಿತರ ಇಲಾಖೆಗಳ ಅಧಿಕಾರಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈಗೆತ್ತಿಕೊಂಡಿರೋ ಕಾಮಗಾರಿ ಅರ್ಧಕ್ಕೆ ಬಿಡುತ್ತಿರುವುದರಿಂದ ಸದ್ಯ ನಗರದ ಸೌಂದರ್ಯ ಹಾಳಾಗುತ್ತಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರ ತೆರಿಗೆ ಹಣ ಕೂಡಾ ಪೋಲಾಗುತ್ತಿದೆ. ಆದರೆ ಸ್ಮಾಟ್೯ ಸಿಟಿ ಅಧಿಕಾರಿಗಳು ಮಾತ್ರ ನಾವು ಇನ್ನೊಮ್ಮೆ ಚರ್ಚಿಸಿ ಬೆಲೆ ನಿರ್ಧಾರ ಮಾಡುತ್ತೇವೆ ಎನ್ನುತ್ತಾರೆ.

ಇನ್ನೂ ಕೇಂದ್ರ ಸರ್ಕಾರದ ಆದೇಶದಂತೆ ಸ್ಮಾರ್ಟ ಸಿಟಿ ಯೋಜನೆಯಡಿ ವಿದ್ಯುತ್ ಉಳಿತಾಯ ಮಾಡೋಕೆ ಈ ಯೋಜನೆ ಮಾಡಲಾಗಿದ್ದು, ಒಟ್ಟು 4 ಕೋಟಿ 30 ಲಕ್ಷ ವೆಚ್ಚದಲ್ಲಿ ಯೋಜನೆಯ ರೂಪುರೇಷೆ ಸಿದ್ಧವಾಗಿತ್ತು. ಅಲ್ಲದೇ ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯ ಒಟ್ಟು 47 ಕಟ್ಟಡಗಳಲ್ಲಿ ಸೋಲಾರ್ ಪ್ಯಾನಲ್ ಅವಳವಡಿಸಲು ಪ್ಲಾನ್​​ ಮಾಡಲಾಗಿತ್ತು. ಆದ್ರೆ ಅದ್ಯಾವುದು ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ವೆಚ್ಚ ಕಡಿಮೆ ಮಾಡೋ ನಿಟ್ಟಿನಲ್ಲಿ ಸರ್ಕಾರ ಈ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರೋ ಟೆಂಡರ್​ನಲ್ಲಿ ಈ ರೀತಿಯ ಗೊಂದಲಗಳಿಂದಾಗಿ ಗುತ್ತಿಗೆದಾರರು ಟೆಂಡರ್ ಪಡೆಯಲು ಹಿಂದೇಟು ಹಾಕುತ್ತಿರೋದು ವಿಪರ್ಯಾಸವೇ ಸರಿ.

ABOUT THE AUTHOR

...view details