ಕರ್ನಾಟಕ

karnataka

ETV Bharat / state

ಬಿಜೆಪಿಗೆ ಜೆಡಿಎಸ್​ ಬೆಂಬಲ ನೀಡಲ್ಲ, ಯಾಕಂದ್ರೆ ನಾನು ಜೆಡಿಎಸ್​ನಲ್ಲಿದ್ದು ಬಂದಿದ್ದೇನೆ: ಸಿದ್ದು ಹೊಸ ಬಾಂಬ್​​​

ಬಿಜೆಪಿ 8 ಸ್ಥಾನ ಗೆಲ್ಲದೇ ಹೋದ್ರೆ ರಾಜೀನಾಮೆ ನೀಡಬೇಕು. ಕುದುರೆ ವ್ಯಾಪಾರ ಮಾಡಿ ಎಲೆಕ್ಷನ್ ಮಾಡುತ್ತಿದ್ದಾರೆ. ಒಂದು ವೇಳೆ, ಬಿಜೆಪಿ ಸೋತು ಅತಂತ್ರವಾದರೂ ಜೆಡಿಎಸ್ ಸಪೋರ್ಟ್ ಮಾಡಲ್ಲ. ಯಾಕೆಂದ್ರೆ ನಾನು ಜೆಡಿಎಸ್​ನಲ್ಲೆ ಇದ್ದು ಬಂದವನು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

By

Published : Nov 25, 2019, 10:00 AM IST

Updated : Nov 25, 2019, 12:02 PM IST

ಹುಬ್ಬಳ್ಳಿ : ಉಪಚುನಾವಣೆ ನಂತರ ಒಂದು ವೇಳೆ, ಸರ್ಕಾರ ಬಹುಮತ ಕಳೆದುಕೊಂಡರೆ, ಜೆಡಿಎಸ್ ಬಿಜೆಪಿಗೆ ಸಪೋರ್ಟ್ ಮಾಡೋಲ್ಲ. ನನಗೆ ಗೊತ್ತು ನಾನು ಜೆಡಿಎಸ್​ನಲ್ಲಿ‌ಯೇ ಇದ್ದು ಬಂದವನು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ವಿಮಾನ‌ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿ 8 ಸ್ಥಾನ ಗೆಲ್ಲದೇ ಹೊದ್ರೆ ರಾಜೀನಾಮೆ ನೀಡಬೇಕು. ಕುದುರೆ ವ್ಯಾಪಾರ ಮಾಡಿ ಎಲೆಕ್ಷನ್ ಮಾಡುತ್ತಿದ್ದಾರೆ. ಒಂದು ವೇಳೆ, ಬಿಜೆಪಿ ಸೋತು ಅತಂತ್ರವಾದರೂ ಜೆಡಿಎಸ್ ಸಪೋರ್ಟ್ ಮಾಡಲ್ಲ. ಯಾಕೆಂದ್ರೆ ನಾನು ಜೆಡಿಎಸ್​ನಲ್ಲೆ ಇದ್ದು ಬಂದವನು. ಹೀಗಾಗಿ ನನಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸಿಎಂ ಯಡಿಯೂರಪ್ಪ ಡಿಸ್ಬರ್ಬ್ ಆಗಿ 15 ಕ್ಷೇತ್ರ ಗೆಲ್ಲುತ್ತೇವೆ ಎನ್ನುತ್ತಿದ್ದಾರೆ ಎಂದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಬಾಂಬ್

ಮಧ್ಯಂತರ ಚುನಾವಣೆ ಆದರೆ 100ಕ್ಕೆ 100 ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ನಾನು ಸಿಎಂ ಆಗೋದು ಬಿಡೋದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾನೀಗಾಗಲೇ ಐದು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇನೆ. ಡಿ. 3 ನೇ ತಾರೀಖಿನೊಳಗೆ ಎಲ್ಲಾ ಕ್ಷೇತ್ರಗಳಿಗೆ ಭೇಟಿ‌ನೀಡಿ ಪ್ರಚಾರ ಮಾಡುತ್ತೇನೆ ಎಂದರು.

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದೊಂದು ಪ್ರಜಾಪ್ರಭುತ್ವದ ಕಗ್ಗೊಲೆ. ಇತಿಹಾಸದಲ್ಲೇ ಆ ರೀತಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆದಿದ್ದು ನೋಡಿಲ್ಲ. ಇದಕ್ಕಿಂತ ಪ್ರಜಾಪ್ರಭುತ್ವದ ಅಣಕ ಇನ್ನೊಂದಿಲ್ಲ. ಕೋಮುವಾದಿ ಪಾರ್ಟಿ ಸ್ನೇಹ ತ್ಯಜಿಸಿದ್ದರಿಂದಲೇ ನಾವು ಶಿವಸೇನೆ ಬೆಂಬಲಿಸಲು ತೀರ್ಮಾನ ಮಾಡಿದ್ದೆವು ಎಂದು ಸಿದ್ದರಾಮಯ್ಯ ಶಿವಸೇನೆಗೆ ಬೆಂಬಲ ನೀಡುವ ಪಕ್ಷದ ನಿರ್ಧಾರವನ್ನ ಸಮರ್ಥಿಸಿಕೊಂಡರು.

Last Updated : Nov 25, 2019, 12:02 PM IST

For All Latest Updates

TAGGED:

ABOUT THE AUTHOR

...view details