ಹುಬ್ಬಳ್ಳಿ: ಯಡಿಯೂರಪ್ಪ ಆಡಿಯೋ ಪ್ರಕರಣದ ತನಿಖೆಗೆ ಎಸ್‌ಐಟಿ ನೇಮಕ ಮಾಡಬೇಕಿರುವುದು ಸಿಎಂ ಅವರೇ ಹೊರತು ನಾನಲ್ಲ. ಅದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಂಬಂಧಿಸಿದ್ದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಸಿದ್ದರಾಮಯ್ಯ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುತ್ತಿದ್ದಾರೆ ಎನ್ನುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯೋಕ್ಕೆ ಆಗುತ್ತಾ.? ವಿರೋಧ ಪಕ್ಷದವರು ಸುಮ್ಮನೆ ಹೀಗೆ ಹೇಳುತ್ತಿದ್ದಾರೆ ಎಂದರು.
ಎಸ್‌ಸಿ, ಎಸ್‌ಟಿ ಬಡ್ತಿ ಮೀಸಲಾತಿಗೆ ಸಿಎಂ ಸಹಿ ಮಾಡಬೇಕು. ಮೊದಲಿದ್ದ ಹಾಗೆ ಇರಬೇಕಾ, ಸೀನಿಯಾರಿಟಿ ಇರಬೇಕಾ ಎನ್ನುವ ಚರ್ಚೆ ನಡೆಯುತ್ತಿದೆ. ನಾವು ಮಾಡಿದ್ದ ಕಾಯ್ದೆ ಜಾರಿ ಮಾಡಲೇಬೇಕು ಎಂದರು.
ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಈಗ ರಾಜ್ಯ ರಾಜಕಾರಣದಲ್ಲಿದ್ದೇನೆ, ಇಲ್ಲೇ ಮುಂದುವರಿಯುತ್ತೇನೆ. ಜೆಡಿಎಸ್ ಜೊತೆ ಸೀಟು ಹಂಚಿಕೆ ಒಪ್ಪಂದ ಆಗುತ್ತೆ ಎನ್ನುವ ಆಶಾಭಾವನೆಯಿದೆ. ಸುಮಲತಾ ನನ್ನನ್ನು ಭೇಟಿಯಾಗಿದ್ರು. ನಾವಿನ್ನೂ ಸೀಟು ಹಂಚಿಕೆ ಚರ್ಚೆ ಮಾಡಿಲ್ಲಮ್ಮ, ಆಮೇಲೆ ಮಾತಾಡುತ್ತೇನೆ ಎಂದಿದ್ದೇನೆ. ಸಿಎಂ ಸ್ಥಾನ ತಪ್ಪಿಸಲಾಗಿದೆ ಎಂದು ಜಿ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಜಿ. ಪರಮೇಶ್ವರ್ ಯಾವ ರೀತಿ ಹೇಳಿದ್ರು ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ನೀವು ಕೇಳಬೇಕು ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿಸುತ್ತಿರುವುದು ಗೊತ್ತಿಲ್ಲ.ಸಿಎಂ ಕುಮಾರಸ್ವಾಮಿ ರಾಜಿನಾಮೆ ಮಾತಿನ ಬಗ್ಗೆ ಪ್ರತಿಕ್ರಿಯಿಸಲ್ಲ ಶಿವಶಂಕರಪ್ಪನವರು ಖರ್ಗೆಯವರಿಗೆ ಪ್ರಧಾನಿಯಾಗುವ ಸಾಮರ್ಥ್ಯ ಇದೆ ಅಂದಿದ್ದಾರೆ. ರಾಹುಲ್ ಗಾಂಧಿ ಯವರಿಗೆ ಸಾಮರ್ಥ್ಯ ಇಲ್ಲ ಅಂದಿಲ್ಲ ಎಂದರು.