ಕರ್ನಾಟಕ

karnataka

ETV Bharat / state

ದೇಶದಲ್ಲಿ ಪುನಃ 1970ರ ಹಸಿರು ಕ್ರಾಂತಿ ಆಗಬೇಕಿದೆ.. ಸೆಲ್ಕೋ ಇಂಡಿಯಾ ಸಂಸ್ಥಾಪಕ ಡಾ. ಹರೀಶ್​ ಹಂದೆ - ಧಾರವಾಡ ಕೃಷಿ ವಿವಿ 34ನೇ ಘಟಿಕೋತ್ಸವದಲ್ಲಿ ಡಾ. ಹರೀಶ್​ ಹಂದೆ ಭಾಗಿ

2030ಕ್ಕೆ ಸುಸ್ಥಿರ ಅಭಿವೃದ್ಧಿ ದೇಶದ ಪರಿಕಲ್ಪನೆಯಾಗಿದೆ. ಭಾರತ ಸುಸ್ಥಿರ ಅಭಿವೃದ್ಧಿ ದೇಶ ಆಗೋದು ರೈತರ ಕೈಯಲ್ಲಿದೆ. ಇಂದು ಕೃಷಿ ಕ್ಷೇತ್ರದಲ್ಲಿ ಉತ್ತಮ ಆವಿಷ್ಕಾರಗಳು ಹೆಚ್ಚಾಗಬೇಕಿದೆ..

Harish hande
ಡಾ. ಹರೀಶ್​ ಹಂದೆ

By

Published : Oct 18, 2021, 7:06 PM IST

Updated : Oct 18, 2021, 7:43 PM IST

ಧಾರವಾಡ :ನಮ್ಮ ದೇಶದಲ್ಲಿ ಪುನಃ 1970ರ ಹಸಿರು ಕ್ರಾಂತಿ ಆಗಬೇಕಿದೆ. ಯಾವುದೇ ಆ್ಯಪ್, ಸಾಫ್ಟ್​ವೇರ್‌ನಿಂದ ನಮ್ಮ ದೇಶ ಅಭಿವೃದ್ಧಿಯಾಗಲಾರದು. ರೈತರ ಅಭಿವೃದ್ಧಿಯಾದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಸೆಲ್ಕೋ ಇಂಡಿಯಾ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಹರೀಶ್​​ ಹಂದೆ ಹೇಳಿದರು.

ಸೆಲ್ಕೋ ಇಂಡಿಯಾ ಸಂಸ್ಥಾಪಕ ಡಾ. ಹರೀಶ್​ ಹಂದೆ

ನಗರದ ಕೃಷಿ ವಿಶ್ವವಿದ್ಯಾಲಯದ ‌ರೈತ ಜ್ಞಾನಾಭಿವೃಧ್ದಿ ಕೇಂದ್ರದಲ್ಲಿ ನಡೆದ 34ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿವಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಲೀಸಾಗಿ ಪದವಿ ಸಿಕ್ಕು ಬಿಡುತ್ತಿದೆ.

ಆದರೆ, ಅನುಭವಿ ರೈತನಿಗೆ ಪದವಿಗಳೇ ಸಿಗೋದಿಲ್ಲ. 40 ವರ್ಷ ಕಬ್ಬು ಬೆಳೆದ ರೈತನಿಗೆ ಪದವಿ ಸಿಗೋದಿಲ್ಲ ಹಾಗೂ ರೈತರನ್ನು ಕೃಷಿ ತಜ್ಞ ಎಂದು ಪರಿಗಣಿಸೋದೆ ಇಲ್ಲ. ಅಂತಹ ರೈತರಿಂದ ಕೃಷಿ ವಿವಿಗಳಲ್ಲಿ ಕಲಿಸುವಂತಹ ಪದ್ಧತಿ ಬರಬೇಕು ಎಂದರು.

2030ಕ್ಕೆ ಸುಸ್ಥಿರ ಅಭಿವೃದ್ಧಿ ದೇಶದ ಪರಿಕಲ್ಪನೆಯಾಗಿದೆ. ಭಾರತ ಸುಸ್ಥಿರ ಅಭಿವೃದ್ಧಿ ದೇಶ ಆಗೋದು ರೈತರ ಕೈಯಲ್ಲಿದೆ. ಇಂದು ಕೃಷಿ ಕ್ಷೇತ್ರದಲ್ಲಿ ಉತ್ತಮ ಆವಿಷ್ಕಾರಗಳು ಹೆಚ್ಚಾಗಬೇಕಿದೆ.

ಸೆಲ್ಕೋ ಇಂಡಿಯಾ ಸಂಸ್ಥಾಪಕ ಡಾ. ಹರೀಶ್​ ಹಂದೆ

ಆ್ಯಪ್ ಮತ್ತು ಸಾಫ್ಟ್​ವೇರ್‌ ಆವಿಷ್ಕಾರ ಬೇಕಾಗಿಲ್ಲ. ಕೃಷಿ ಪದವೀಧರರಿಂದಲೇ 1970ರ ಹಸಿರು ಕ್ರಾಂತಿ ಪುನಃ ಆಗಬೇಕಿದೆ. ಕೃಷಿ ಪದವೀಧರರು ರೈತರನ್ನು ಸೃಷ್ಟಿ ಮಾಡಬೇಕಿದೆ ಎಂದರು.

911 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ :ರಾಜ್ಯಪಾಲ ಹಾಗೂ ವಿವಿಯ ಸಹ ಕುಲಾಧಿಪತಿ ಥಾವರ್​​ ಚಂದ್​ ಗೆಹ್ಲೋಟ್ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಿದರು. 53 ಚಿನ್ನದ ಪದಕ, 9 ನಗದು ಬಹುಮಾನ, 63 ಪಿಹೆಚ್‌ಡಿ, 247 ಸ್ನಾತಕೋತ್ತರ ಹಾಗೂ 601 ಸ್ನಾತಕ ಪದವಿ ಸೇರಿ ಒಟ್ಟು 911 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸರಳತೆ ಮೆರೆದ ರಾಜ್ಯಪಾಲರು

ಸರಳತೆ ಮೆರೆದ ರಾಜ್ಯಪಾಲರು :ವಿವಿ ಘಟಿಕೋತ್ಸವ ಹಿನ್ನೆಲೆಯಲ್ಲಿ ವೇದಿಕೆಯಿಂದ ರಾಜ್ಯಪಾಲರು ಇಳಿದು ಜನರ ಬಳಿ ಬಂದು ಸರಳತೆ ಮೆರೆದಿದ್ದಾರೆ. ಘಟಿಕೋತ್ಸವದ ಬಳಿಕ ಶಿಷ್ಟಾಚಾರದಂತೆ ಮೆರವಣಿಗೆಯಲ್ಲಿ ತೆರಳಬೇಕಿತ್ತು. ಆದರೆ, ವೇದಿಕೆಯಿಂದ ನೇರ ಸಭಿಕರತ್ತ ಬಂದು ಸರಳತೆ ತೋರಿದರು.

ಕೃಷಿ ವಿಶ್ವವಿದ್ಯಾಲಯದ ‌34ನೇ ಘಟಿಕೋತ್ಸವ ಸಮಾರಂಭ

ಕಾರ್ಯಕ್ರಮಕ್ಕೆ ಗೈರಾದ ಚಿನ್ನದ ಹುಡುಗಿ :ವಿವಿ ಬಿಎಸ್ಸಿಯಲ್ಲಿ ಪ್ರಥಮ ರ್ಯಾಂಕ ಪಡೆದ ವಿದ್ಯಾರ್ಥಿನಿ ಪೂಜಾ ವಿಜಯ್ ಕುಲಕರ್ಣಿ ಘಟಿಕೋತ್ಸವ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈಕೆ ಬಿಎಸ್ಸಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪೂಜಾ ಅವರ ಅನುಪಸ್ಥಿತಿಯಲ್ಲಿ ಆಕೆಯ ಪೋಷಕರಿಗೆ ಪದಕ ಹಸ್ತಾಂತರಿಸಲಾಯಿತು.

ಇದನ್ನೂ ಓದಿ: ಇದೇ ತಿಂಗಳು 25 ರಿಂದ 1-5ನೇ ತರಗತಿ ಆರಂಭ.. ಶೇ 50 ರಷ್ಟು ಮಾತ್ರ ಹಾಜರಾತಿ

Last Updated : Oct 18, 2021, 7:43 PM IST

ABOUT THE AUTHOR

...view details