ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಫುಟ್​ಪಾತ್​ ಒತ್ತುವರಿ ಮಾಡಿವರಿಗೆ ಶಾಕ್​ ಕೊಟ್ಟ ಮಹಾನಗರ ಪಾಲಿಕೆ - kannada news

ಹುಬ್ಬಳ್ಳಿಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ನಿಲಿಜನ್ ರಸ್ತೆ, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಕಡೆಗಳಲ್ಲಿ ಫುಟ್​ಪಾತ್ ​ಮೇಲೆ ನಿರ್ಮಿಸಲಾಗಿದ್ದ ನೂರಕ್ಕೂ ಹೆಚ್ಚು ಅಂಗಡಿಗಳನ್ನು ಪಾಲಿಕೆಯಿಂದ ತೆರವುಗೊಳಿಸಲಾಯಿತು.

ಹುಬ್ಬಳ್ಳಿಯಲ್ಲಿ ಪುಟ್​ಪಾತ್​ ಒತ್ತುವರಿ: ಪಾಲಿಕೆಯಿಂದ ಅಂಗಡಿಗಳ‌ ತೆರವು

By

Published : Jul 30, 2019, 3:27 AM IST

ಹುಬ್ಬಳ್ಳಿ: ನಗರದ ವಿವಿಧೆಡೆಯಲ್ಲಿ ಫುಟ್​ಪಾತ್​ನ್ನು ಅತಿಕ್ರಮಿಸಿ ಅಂಗಡಿ-ಮುಂಗಟ್ಟು ನಿರ್ಮಿಸುವ ಮೂಲಕ ಸಂಚಾರಕ್ಕೆ ಅಡ್ಡಿ ಮಾಡಿದವರನ್ನು ಮಹಾನಗರ ಪಾಲಿಕೆ ತೆರವುಗೊಳಿಸಿತು.

ಜಿಲ್ಲಾಧಿಕಾರಿ ಆದೇಶದಂತೆ ಈ ಹಿಂದೆ ಫುಟ್​ಪಾತ್​ ಒತ್ತುವರಿ ಮಾಡಿದವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ ಸೋಮವಾರ ಇಲ್ಲಿನ ನಿಲಿಜನ್ ರಸ್ತೆ, ದೇಶಪಾಂಡೆ ನಗರ, ಕೋರ್ಟ್ ಸರ್ಕಲ್ ಕಡೆಗಳಲ್ಲಿ ಫುಟ್​ಪಾತ್​ ಮೇಲೆ ನಿರ್ಮಿಸಲಾಗಿದ್ದ ನೂರಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಯಿತು. ಇದೇ ವೇಳೆ ಅಂಗಡಿ ಮಾಲೀಕರಿಗೆ ಫುಟ್​ಪಾತ್​ಗಳ ಮೇಲೆ ಮತ್ತೊಮ್ಮೆ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಇನ್ನು ರಸ್ತೆ ಅತಿಕ್ರಮಣದಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ತಕ್ಷಣ ತೆರವುಗೊಳಿಸುವಂತೆ ಇತ್ತೀಚೆಗೆ ಸಾರ್ವಜನಿಕರು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಜನಪ್ರತಿನಿಧಿಗಳು ತೆರವಿಗೆ ಆಗ್ರಹಿಸಿದ್ದರು. ನಂತರ ಜಿಲ್ಲಾಧಿಕಾರಿ ಸಭೆ ನಡೆಸಿ ತೆರವಿಗೆ ಸೂಚಿಸಿದ್ದರು. ಅದರಂತೆ ಕಾರ್ಯ ಪ್ರವೃತ್ತವಾಗಿರುವ ಪಾಲಿಕೆ ಅತಿಕ್ರಮಣವಾಗಿದ್ದ ಸ್ಥಳಗಳಲ್ಲಿ ಅಂಗಡಿ‌ಗಳನ್ನು ತೆರವುಗೊಳಿಸಿದ್ದಾರೆ.

ABOUT THE AUTHOR

...view details