ಕರ್ನಾಟಕ

karnataka

ETV Bharat / state

ಸಾಮಾಜಿಕ ಜಾಲತಾಣಗಳಲ್ಲಿ ನೋಡ್ರಪ್ಪೋ ನೋಡ್ರೀ, ಹು-ಧಾ ಹದಗೆಟ್ಟ ರಸ್ತೆಗಳ ರೋಡ್‌ ಚಾಲೆಂಜ್‌!! - congress leader challenge

ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳ ಫೋಟೋಗಳನ್ನು ಫೇಸ್‌ಬುಕ್​ನಲ್ಲಿ ಶೇರ್ ಮಾಡಿ ಚಾಲೆಂಜ್ ಮಾಡುತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರ ಚಾಲೆಂಜ್​ಗೆ ಹುಬ್ಬಳ್ಳಿ-ಧಾರವಾಡ ಜನತೆ ಸ್ಪಂದಿಸಿದ್ದಾರೆ..

Road challenge from congress leader
ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

By

Published : Sep 30, 2020, 8:23 PM IST

ಹುಬ್ಬಳ್ಳಿ :ಸಾಮಾಜಿಕ ಜಾಲತಾಣದಲ್ಲಿ ಹಲವು ಚಾಲೆಂಜ್​ಗಳು ಆಗಾಗ ಸದ್ದು ಮಾಡುವುದೇನೂ ಹೊಸತಲ್ಲ. ಸದ್ಯ ಫೇಸ್‌ಬುಕ್​ನಲ್ಲಿ ಬಗೆಬಗೆ ಚಾಲೆಂಜ್​ಗಳು ಟ್ರೆಂಡ್ ಕ್ರಿಯೇಟ್ ಮಾಡಿವೆ.

ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಮದರ್ ಚಾಲೆಂಜ್ ಹೀಗೆ.. ಸಾಕಷ್ಟು ಚಾಲೆಂಜ್​ಗಳು ಹವಾ ಸೃಷ್ಟಿಸಿವೆ. ಅದೇ ರೀತಿ ಇಲ್ಲಿನ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ವಿಭಿನ್ನ ರೀತಿಯ ಚಾಲೆಂಜ್ ಆರಂಭಿಸಿ ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳ ಫೋಟೋಗಳನ್ನು ಫೇಸ್‌ಬುಕ್​ನಲ್ಲಿ ಶೇರ್ ಮಾಡಿ ಚಾಲೆಂಜ್ ಮಾಡುತ್ತಿರುವ ರಜತ್ ಉಳ್ಳಾಗಡ್ಡಿಮಠ ಅವರ ಚಾಲೆಂಜ್​ಗೆ ಹುಬ್ಬಳ್ಳಿ-ಧಾರವಾಡ ಜನತೆ ಸ್ಪಂದಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!!

ಹುಬ್ಬಳ್ಳಿ ಸ್ಮಾರ್ಟ್ ಸಿಟಿಗೆ ಒಳಪಟ್ಟಿದ್ದರು ಕೂಡ ಇಲ್ಲಿನ ರಸ್ತೆಗಳು ಸ್ಮಾರ್ಟ್ ಆಗದೇ ಇನ್ನಷ್ಟು ಹದಗೆಟ್ಟಿವೆ. ಈ ಬಗ್ಗೆ ಜನಸಾಮಾನ್ಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಎಚ್ಚೆತ್ತಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಪರಿಣಾಮ ನಗರದ ರಸ್ತೆಗಳ ಪರಿಸ್ಥಿತಿ ಹೇಳತೀರದಾಗಿದೆ. ನಿತ್ಯ ಶಪಿಸುತ್ತಾ ಓಡಾಡುವಂತಾಗಿದೆ. ಕಲಘಟಗಿ, ನವಲಗುಂದ, ಕುಂದಗೋಳ ತಾಲೂಕುಗಳ ನೂರಾರು ಜನ ಹುಬ್ಬಳ್ಳಿ ಮೇಲೆಯೇ ಹೆಚ್ಚಾಗಿ ಓಡಾಡಬೇಕು.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಸಂಚಾರ ದುಸ್ಥರವಾಗಿದ್ದು, ರಸ್ತೆಗಳ ಗುಂಡಿ ನೋಡಿ ಹೈರಾಣಾಗಿದ್ದಾರೆ. ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರಿಂದ ಅಪಘಾತಗಳು ಸಹ ಹೆಚ್ಚಾಗುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಈ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆಯಲು ಕಾಂಗ್ರೆಸ್ ಮುಖಂಡ ರಜತ್ ಅವರು ಸಾಮಾಜಿಕ ಜಾಲತಾಣ ಮೊರೆ ಹೋಗುವ ಮೂಲಕ ಈ ರೀತಿಯ ಚಾಲೆಂಜ್ ಆರಂಭಿಸಿದ್ದಾರೆ. ಈ ವಿನೂತನ ಪ್ರತಿಭಟನೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ABOUT THE AUTHOR

...view details