ಹುಬ್ಬಳ್ಳಿ: ಅಪ್ರಾಪ್ತೆ ಮೇಲೆ ಬಲವಂತದಿಂದ ಲೈಂಗಿಕ ದೌರ್ಜನ್ಯ ನಡೆಸಿ ಗರ್ಭಿಣಿಯಾಗುವಂತೆ ಮಾಡಿರುವ ಬಗ್ಗೆ ನಗರದ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ಹುಬ್ಬಳ್ಳಿ ಪಡೆದಯ್ಯನಹಕ್ಕಲ್ ಮರಿಯಮ್ಮ ಗುಡಿ ಹತ್ತಿರದ 16 ವರ್ಷದ ಬಾಲಕಿ ಮೇಲೆ ದೌರ್ಜನ್ಯ ನಡೆದಿದೆ. ಆರೋಪಿ ಉಮೇಶ ಹುಲಿಕಟ್ಟಿ (35) ಎಂಬಾತನ ಮೇಲೆ ಸಂತ್ರಸ್ತೆಯ ಮನೆಯವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜುಲೈ ತಿಂಗಳಲ್ಲಿ ಕೃತ್ಯ ನಡೆದಿದ್ದು, ಇದೀಗ ಅಕ್ಟೋಬರ್ 29ರಂದು ಪೋಷಕರು ದೂರು ನೀಡಿದ್ದಾರೆ.