ಧಾರವಾಡ: ಜಿಲ್ಲೆಯಲ್ಲಿ ಇಂದು ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಕೃಷಿ ವಿಜ್ಞಾನ ವಿಭಾಗ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಯನ್ನು ರೆಡ್, ಆರೆಂಜ್, ಯೆಲ್ಲೋ ಅಲರ್ಟ್ ಆಗಿ ವಿಂಗಡಿಸಲಾಗಿದೆ.
ಧಾರವಾಡದಲ್ಲಿ ಮಳೆ ಅಬ್ಬರ: ಆರೆಂಜ್ ಅಲರ್ಟ್ ಘೋಷಣೆ
ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ ಮಳೆಯ ಅಬ್ಬರ ಮುಂದುವರೆಯಲಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಧಾರವಾಡದಲ್ಲಿ ಮಳೆ ಅಬ್ಬರ
ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ವಿಜಯಪುರ ರೆಡ್ ಅಲರ್ಟ್ನಲ್ಲಿವೆ. ಧಾರವಾಡ, ಗದಗ, ಕಲಬುರಗಿ ಆರೆಂಜ್ ಅಲರ್ಟ್ನಲ್ಲಿದ್ದು, ಬೀದರ್, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಯೆಲ್ಲೋ ಅಲರ್ಟ್ನಲ್ಲಿವೆ ಎಂದು ಮುನ್ಸೂಚನೆ ನೀಡಿದೆ.
ಈಗಾಗಲೇ ಸುರಿದಿರುವ ಮಳೆ ಭಾರಿ ಆವಾಂತರ ಸೃಷ್ಟಿ ಮಾಡಿದ್ದು, ಅನ್ನದಾತರಿಗೆ ಸಂಕಷ್ಟ ತಂದಿಟ್ಟಿದೆ. ಆಲೂಗಡ್ಡೆ, ಶೇಂಗಾ ಬೆಳೆ ಹಾಳಾಗಿವೆ. ಇವತ್ತು ಕೂಡ ಮಳೆ ಮುಂದುವರೆಯಲಿದ್ದು, ಇನ್ನೂ ಏನೇನು ಆವಾಂತರ ಸೃಷ್ಟಿ ಮಾಡುತ್ತದೆ ಎಂಬುದು ಚಿಂತೆಗೀಡು ಮಾಡಿದೆ.