ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲಾದ್ಯಂತ ಧಾರಾಕಾರ ಮಳೆ: ರಸ್ತೆಗಳು ಜಲಾವೃತ

ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಳ್ನಾವರ ಪಟ್ಟಣದ ದೇಸಾಯಿ ಚಾಳ ಮತ್ತು ಎಂ.ಸಿ. ಹಿರೇಮಠ ಪ್ಲಾಟ್ ಬಡಾವಣೆಗಳಿಗೆ ನೀರು ಆವರಿಸಿದೆ.

ಮಳೆ ಹಿನ್ನೆಲೆ ಜಿಲ್ಲೆಯಲ್ಲಿ‌ ಅಲ್ಲಲ್ಲಿ ನುಗ್ಗಿದ ನೀರು

By

Published : Aug 6, 2019, 10:58 AM IST

ಧಾರವಾಡ:ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ನಗರ, ಅಳ್ನಾವರ ಪಟ್ಟಣ ಮತ್ತು ತಾಲೂಕಿನ ಕೆಲ ಭಾಗಗಳ ಸಂಪರ್ಕ ಕಡಿತಗೊಂಡಿದೆ.

ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ದೇಸಾಯಿ ಚಾಳ ಮತ್ತು ಎಂ.ಸಿ. ಹಿರೇಮಠ ಪ್ಲಾಟ್ ಎರಡು ಬಡಾವಣೆಗಳಿಗೆ ನೀರು ಆವರಿಸಿದೆ. ಅಳ್ನಾವರ ಬಳಿಯ ಪುರ ಮತ್ತು ಗುಂಡೊಳ್ಳಿ ಗ್ರಾಮಗಳ ರಸ್ತೆಗಳು ಜಲಾವೃತಗೊಂಡು ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮಳೆ ಹಿನ್ನೆಲೆ ಜಿಲ್ಲೆಯಲ್ಲಿ‌ ಅಲ್ಲಲ್ಲಿ ನುಗ್ಗಿದ ನೀರು

ಅದಷ್ಟೇ ಅಲ್ಲದೇ ಧಾರವಾಡ ಹೊಯ್ಸಳ ನಗರದ ಹತ್ತಿರ ಮಧ್ಯರಾತ್ರಿ ರಸ್ತೆಯಲ್ಲಿ ಮರ ಬಿದ್ದ ಪರಿಣಾಮ ಬೆಳಗ್ಗೆವರೆಗೂ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಧಾರವಾಡ ನಗರದ ಕವಿವಿ ಆವರಣದಲ್ಲಿ ಸಹ ಮರವೊಂದು ಉರುಳಿ ಬಿದ್ದು, ವಿದ್ಯುತ್ ಸಂಪರ್ಕ‌ ಕಡಿತಗೊಂಡು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಇನ್ನು ಧಾರಾಕಾರ ಮಳೆಯಿಂದ ಜಿಲ್ಲೆಯ ತುಪ್ಪರಿ ಹಳ್ಳ ಹಾಗೂ ಬೆಣ್ಣಿಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಧಾರವಾಡ ತಾಲೂಕಿನ ತೇಗೂರ-ಹಳೇತೆಗೂರ ರಸ್ತೆ ‌ಸಂಪರ್ಕ ಸಹ ಕಡಿತಗೊಂಡಿದೆ.

ABOUT THE AUTHOR

...view details