ಹುಬ್ಬಳ್ಳಿ: ಹುಬ್ಬಳ್ಳಿ ಛಬ್ಬಿ ಗ್ರಾಮದಲ್ಲಿ ಬೆಳಿಗ್ಗೆನಿಂದ ಅಧಿಕಾರಿಗಳೊಂದಿಗೆ ಗ್ರಾಮದ ಬೀದಿ ಸುತ್ತಿ ಜನರ ಅಹವಾಲುಗಳನ್ನು ಸ್ವೀಕರಿಸಿ, ಪರಿಷ್ಕರಣೆ ಮಾರ್ಗ ತೋರಿದ ಕಂದಾಯ ಸಚಿವ ಆರ್.ಅಶೋಕ್ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು.
ಸರ್ಕಾರಿ ಶಾಲೆಯಲ್ಲಿ ಸಚಿವ ಆರ್. ಅಶೋಕ್ ಗ್ರಾಮವಾಸ್ತವ್ಯ
ಮಧ್ಯಾಹ್ನ ಕೊಂಚ ಖಾರವಾದರೂ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿದರು. ರಾತ್ರಿ ಲಘು ಆಹಾರವಾಗಿ ಸ್ವೀಕರಿಸಿದರು. ನಂತರ ತಮಗಾಗಿ ಸಿದ್ಧವಾಗಿದ್ದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಮಲಗಿದರು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಿಹರಿಸಿದ ಸಚಿವರು ದಾರಿಯಲ್ಲಿ ಸಿಕ್ಕವರ ಅಹವಾಲುಗಳನ್ನೂ ಕೂಡ ಸ್ವೀಕರಿದರು.
ಸಚಿವ ಆರ್. ಅಶೋಕ್ ಗ್ರಾಮವಾಸ್ತವ್ಯ
ಮಧ್ಯಾಹ್ನ ಕೊಂಚ ಖಾರವಾದರೂ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿದರು. ರಾತ್ರಿ ಲಘು ಆಹಾರವಾಗಿ ಸ್ವೀಕರಿಸಿದರು. ನಂತರ ತಮಗಾಗಿ ಸಿದ್ಧವಾಗಿದ್ದ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ಮಲಗಿದರು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಿಹರಿಸಿದ ಸಚಿವರು ದಾರಿಯಲ್ಲಿ ಸಿಕ್ಕವರ ಅಹವಾಲುಗಳನ್ನೂ ಕೂಡ ಸ್ವೀಕರಿದರು.
ನಂತರ ಕೊಠಡಿಯಲ್ಲಿ ಗ್ರಾಮ ವಾಸ್ತವ್ಯದ ಸಾರ್ಥಕ ಭಾವದೊಂದಿಗೆ ನಿದ್ರೆಗೆ ಜಾರಿದರು. ಸಚಿವರೊಂದಿಗೆ ಕಂದಾಯ ಇಲಾಖೆಯ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ತಹಸೀಲ್ದಾರಗಳು ಪಕ್ಕದ ಕೊಠಡಿಯಲ್ಲಿ ಮಲಗಿದರು.