ಧಾರವಾಡ: ಕನ್ನಡ ಚಿತ್ರರಂಗದ ರಾಜರತ್ನ ಪುನೀತ್ ರಾಜ್‍ಕುಮಾರ್ ಇಹಲೋಕ ತ್ಯಜಿಸಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದೆ. ಪುನೀತ್ ಅಗಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಪುನೀತ್ ಸಮಾಧಿಯತ್ತ ತಮ್ಮ ಪಯಣ ಬೆಳೆಸಿದ್ದಾರೆ.
ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಅವರು ಮತ್ತೆ ಪುನೀತ್ ರಾಜ್‍ಕುಮಾರ್ ಸಮಾಧಿಯತ್ತ ತೆರಳುತ್ತಿದ್ದಾರೆ. ಅಪ್ಪು ಮೃತರಾದ ವೇಳೆಯೂ ಅವರ ಸಮಾಧಿವರೆಗೆ ಓಟದ ಮೂಲಕ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ಓಟ ಆರಂಭಿಸಿರುವ ಅವರು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿವರೆಗೂ ಓಡಲಿದ್ದಾರೆ.