ಕರ್ನಾಟಕ

karnataka

ETV Bharat / state

ತಾವೇ ಬೆಳೆಸಿದ ಗಿಣಿಗಳು ಇಂದು ಕಾಂಗ್ರೆಸ್​ಗೆ ಕುಕ್ಕುತ್ತಿವೆ: ಮುತಾಲಿಕ್ ವಾಗ್ದಾಳಿ

ಕೆಂಪು ಬ್ರಿಟಿಷರ ವಿರುದ್ಧ ಧ್ವನಿ ಎತ್ತಲು ಬಾಲ ಗಂಗಾಧರ ತಿಲಕರು ಗಣೇಶನನ್ನು ಪ್ರತಿಷ್ಠಾಪಣೆ ಮಾಡಿದ್ದರು. ಈಗ ಬಿಜೆಪಿಯ ಕಪ್ಪು ಬ್ರಿಟಿಷ್​ ಹೋರಾಟಗಾರರಿಂದ ಗಣೇಶೋತ್ಸವ ಬಂದ್ ಆಗಿದೆ ಎಂದು ಪ್ರಮೋದ್​ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

promod mutalik Brrage aginst Govt promod mutalik Brrage aginst Govt
ಪ್ರಮೋದ್​ಮುತಾಲಿಕ್ ಸುದ್ದಿಗೋಷ್ಟಿ

By

Published : Aug 14, 2020, 6:25 PM IST

ಹುಬ್ಬಳ್ಳಿ :ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಾಟೆ ‌ಮಾಡಿದ್ದು, ಕಾಂಗ್ರೆಸ್‌ನ ಕನಸುಗಳು. ತಾವೇ ಸಾಕಿದ ಗಿಣಿ ಇವತ್ತು ಅವರಿಗೆ ಕುಕ್ಕುತ್ತಿವೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ನೀವೇ ಸಾಕಿ ಬೆಳೆಸಿದ ಗಿಣಿಗಳು ಇವತ್ತು ನಿಮಗೆ ಕುಕ್ಕುತ್ತಿವೆ, ಇದು ಅಪಾಯಕಾರಿ. ಇದನ್ನು ಇದೇ ರೀತಿ ಬಿಟ್ಟರೆ ವಿಧಾನಸೌಧಕ್ಕೆ ಬೆಂಕಿ ಹಚ್ಚುತ್ತಾರೆ‌. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮನೆಗೂ ಬೆಂಕಿ ಹಚ್ಚುತ್ತಾರೆ. ಇವರಿಂದ ದೇಶಕ್ಕೆ ದೊಡ್ಡ ಗಂಡಾಂತರವಿದೆ. ಪಿಎಫ್‌ಐ ಮತ್ತು ಎಸ್‌ಡಿಪಿಐ ಬ್ಯಾನ್ ಮಾಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಸಾಮಾನ್ಯ ನಾಗರಿಕರನ್ನು ಬಿಜೆಪಿಯವರು ಬಲಿ ಕೊಡ್ತಾ ಇದ್ದಾರೆ. ಬಶೀರ ಎನ್ನುವ ವ್ಯಕ್ತಿ ಲಕ್ಷ್ಮಿ ಮತ್ತು ಸರಸ್ವತಿಯ ಬಗ್ಗೆ ಬಹಳ ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಹಾಗಿದ್ದರೆ ನಾವು ಶಾಸಕ ಜಮೀರ್ ಅಹಮದ್ ಅವರ ಮನೆ ಸುಡಬೇಕಾ?. ಯಾರು ಸರ್ಕಾರದ ಆಸ್ತಿಪಾಸ್ತಿಗಳನ್ನ ಹಾನಿ‌ ಮಾಡಿದ್ದಾರೆ, ಅವರ ಆಸ್ತಿಯನ್ನು ಜಪ್ತಿ ಮಾಡಬೇಕು. ಈ ಘಟನೆಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಆಗಿದೆ. ಜಮೀರ್ ಅಹಮದ್ ಬಹಳ ಓವರ್ ಆ್ಯಕ್ಟ್ ಮಾಡ್ತಾ ಇದ್ದಾರೆ. ಜಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್

ಬಿಜೆಪಿಯ ಕಪ್ಪು ಬ್ರಿಟಿಷ್ ಹೋರಾಟಗಾರರಿಂದ ಗಣೇಶೋತ್ಸವ ಬಂದ್:ಕೋವಿಡ್ ನೆಪ ಇಟ್ಟುಕೊಂಡು ಗಣೇಶ ಹಬ್ಬವನ್ನು ಬ್ಯಾನ್ ಮಾಡಲಾಗಿದೆ. ಬೇರೆ ಎಲ್ಲವನ್ನೂ ಓಪನ್ ಮಾಡಿ, ಸಾರ್ವಜನಿಕ ಗಣೇಶೋತ್ಸವ ಬ್ಯಾನ್ ಮಾಡಿದ್ದು ಯಾಕೆ?. ಗುಡಿಗಳಿಗೆ ಹಾಕಿರುವ ನಿಯಮವನ್ನು ನಾವು ಪಾಲನೆ ಮಾಡುತ್ತೇವೆ. ಕೆಂಪು ಬ್ರಿಟಿಷರ ವಿರುದ್ಧ ಧ್ವನಿ ಎತ್ತಲು ಬಾಲ ಗಂಗಾಧರ ತಿಲಕರು ಗಣೇಶನನ್ನು ಪ್ರತಿಷ್ಠಾಪಣೆ ಮಾಡಿದ್ದರು. ಈಗ ಬಿಜೆಪಿಯ ಕಪ್ಪು ಬ್ರಿಟಿಷ್​ ಹೋರಾಟಗಾರರಿಂದ ಗಣೇಶೋತ್ಸವ ಬಂದ್ ಆಗಿದೆ. ಇದರ ವಿರುದ್ಧ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಸಂಪ್ರದಾಯವನ್ನು ನಿಲ್ಲಿಸಬಾರದು, ಮಣ್ಣಿನ ಗಣಪತಿ ವಿಗ್ರಹವನ್ನೇ ಇಟ್ಟುಕೊಂಡು ಪ್ರತಿಭಟನೆ‌ ಮಾಡ್ತೇವೆ. ಎಚ್ಚರಿಕೆಗೆ ಬಗ್ಗದಿದ್ದರೆ ಸರ್ಕಾರದ ನಿಯಮ ಉಲ್ಲಂಘಿಸಿ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ ಎಂದರು.

ABOUT THE AUTHOR

...view details