ಕರ್ನಾಟಕ

karnataka

ETV Bharat / state

ವಿನಯ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಸಿಬಿಐಗೆ ತಕರಾರು ಸಲ್ಲಿಸಲು ಅವಕಾಶ

ಹಿಂಡಲಗಾ ಜೈಲಿನಲ್ಲಿರುವ ವಿನಯ ಕುಲಕರ್ಣಿ ಪರ ವಕೀಲರಿಂದ ನಿನ್ನೆ ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಇಂದು ಮತ್ತೇ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿ ನ್ಯಾಯಾಲಯ ಆದೇಶ ನೀಡಿದೆ.

Postponement of Vinay kulkarni bail application
ವಿನಯ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

By

Published : Nov 27, 2020, 1:22 PM IST

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆ ಡಿ. 4ಕ್ಕೆ ಮುಂದೂಡಿಕೆಯಾಗಿದೆ.

ಯೋಗೇಶಗೌಡ ಹತ್ಯೆ ಪ್ರಕರಣ ಹಿನ್ನೆಲೆ ಮಾಜಿ‌ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ವಿನಯ ಕುಲಕರ್ಣಿ ಪರ ವಕೀಲರಿಂದ ನಿನ್ನೆ ಧಾರವಾಡದ ಮೂರನೇ ಹೆಚ್ಚುವರಿ ಸೆಷನ್ ಕೋರ್ಟ್​​​​​​​ಗೆ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು.

ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿನಯ್ ಪರ ವಕೀಲರು ವಾಪಸ್ ಪಡೆದಿದ್ದರು. ಹೊಸ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು‌ ಮತ್ತೆ ಡಿಸೆಂಬರ್ ​4ಕ್ಕೆ ವಿಚಾರಣೆ ಮುಂದೂಡಿದೆ. ಸಿಬಿಐ ಪರ ವಕೀಲರಿಗೆ ತಕರಾರು‌ ಅರ್ಜಿ ಸಲ್ಲಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ.

ABOUT THE AUTHOR

...view details