ಧಾರವಾಡ: ಕೊರೊನಾ ಚೈನ್ ಬ್ರೇಕ್ ಮಾಡಲು ರಾಜ್ಯ ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಹೇರಿ ಆದೇಶಿಸಿದೆ. ಕೆಲವರು ಆದೇಶ ಪಾಲಿಸಿದ್ರೆ ಇನ್ನು ಕೆಲವರು ಉಲ್ಲಂಘನೆ ಮಾಡುತ್ತಾರೆ. ಅಂತವರ ವಿರುದ್ದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.
ಕೊರೊನಾ ಕರ್ಫ್ಯೂ ಹಿನ್ನೆಲೆ ಅನಗತ್ಯ ಸುತ್ತಾಡುವ ಯುವಕನಿಗೆ ಬಸ್ಕಿ ಹೊಡೆಸಿದ ಪೊಲೀಸರು
ನಗರದ ವಿವಿಧೆಡೆ ಪೊಲೀಸರು ತಪಾಸಣಾ ಕಾರ್ಯ ಮಾಡುತ್ತಿದ್ದು, ಅನಗತ್ಯವಾಗಿ ಸುತ್ತಾಡುವುದು ಗೊತ್ತಾದ್ರೆ ದಂಡ ಹಾಗೂ ಬೈಕ್ ಸೀಜ್ ಮಾಡುತ್ತಿದ್ದಾರೆ..
Baski
ಕರ್ಫ್ಯೂ ವೇಳೆ ಅನಗತ್ಯವಾಗಿ ಹೊರಗೆ ಸುತ್ತಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಧಾರವಾಡದ ಟೋಲ್ ನಾಕಾ ಬಳಿ ಬೈಕ್ ಸವಾರನೋರ್ವನಿಗೆ ಪೊಲೀಸರು ಬಸ್ಕಿ ಹೊಡಿಸಿದ್ದಾರೆ.
ಅಲ್ಲಲ್ಲಿ ಪೊಲೀಸರು ತಪಾಸಣಾ ಕಾರ್ಯ ಮಾಡುತ್ತಿದ್ದು, ಅನಗತ್ಯವಾಗಿ ಸುತ್ತಾಡುವುದು ಗೊತ್ತಾದ್ರೆ ದಂಡ ಹಾಗೂ ಬೈಕ್ ಸೀಜ್ ಮಾಡುತ್ತಿದ್ದಾರೆ.
Last Updated : Apr 28, 2021, 6:09 PM IST