ಹುಬ್ಬಳ್ಳಿ: ದೆಹಲಿಯಿಂದ ನಗರಕ್ಕೆ ಮರಳಿದ್ದ ಐವರನ್ನು ಕೊರೊನಾ ಶಂಕಿತರು ಎಂಬ ಅನುಮಾನದ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ನವಲಗುಂದದ ಮೂವರು ಹಾಗೂ ಹೆಬ್ಬಾಳ, ಹಾಳಕುಸುಗಲ್ ಗ್ರಾಮದ ತಲಾ ಒಬ್ಬೊಬ್ಬರನ್ನು ವೈರಸ್ ಶಂಕಿತರೆಂದು ಪೊಲೀಸರು ವಶಕ್ಕೆ ಪಡೆದು ಬಳಿಕ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದೆಹಲಿಯಲ್ಲಿ ನಡೆದ ಜಮಾತ್ನಲ್ಲಿ ಭಾಗಿ: ಐವರನ್ನು ಕಿಮ್ಸ್ಗೆ ದಾಖಲಿಸಿದ ಪೊಲೀಸರು
ಕೊರೊನಾ ಭೀತಿಯ ನಡುವೆ ನವದೆಹಲಿಯಿಂದ ವಾಪಸಾಗಿದ್ದ ಐವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಐವರು ದೆಹಲಿಯಲ್ಲಿ ಜರುಗಿದ್ದ ಜಮಾತ್ನಲ್ಲಿ ಪಾಲ್ಗೊಂಡು ನಗರಕ್ಕೆ ವಾಪಸಾಗಿದ್ದರು ಎಂಬ ಮಾಹಿತಿ ಕಲೆಹಾಕಿದ ಪೊಲೀಸರು, ಕೊರೊನಾ ಸೋಂಕು ಶಂಕೆ ವ್ಯಕ್ತವಾದ ಹಿನ್ನೆಲೆ ಐವರನ್ನೂ ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೊರೊನಾ ಶಂಕೆ: ಹುಬ್ಬಳ್ಳಿಯಲ್ಲಿ ಐವರನ್ನು ಕಿಮ್ಸ್ಗೆ ದಾಖಲಿಸಿದ ಪೊಲೀಸರು
ಶಂಕಿತರೆಂದು ಗುರುತಿಸಿರುವ ಈ ಐವರು ನವದೆಹಲಿಯ ನಿಜಾಮುದ್ದೀನ್ ಮುರ್ಕಜ ಮಸೀದಿಯಲ್ಲಿ ಜರುಗಿದ ಜಮಾತ್ನಲ್ಲಿ ಪಾಲ್ಗೊಂಡು ಮಾ. 10ರಂದು ದೆಹಲಿಯಿಂದ ರೈಲಿನ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಮಾ. 13ರಂದು ನವಲಗುಂದ ತಲುಪಿದ್ದಾರೆಂಬ ಮಾಹಿತಿ ಕಲೆಹಾಕಲಾಗಿದೆ. ಬಳಿಕ ಐವರನ್ನೂ ವಶಕ್ಕೆ ಪಡೆದು ಕಿಮ್ಸ್ಗೆ ದಾಖಲಿಸಲಾಗಿದೆ.