ಕರ್ನಾಟಕ

karnataka

ETV Bharat / state

ಬಾಲ ಬಿಚ್ಚಿದ್ರೆ ಹುಷಾರ್​: ರೌಡಿಗಳಿಗೆ ಪೊಲೀಸ್​ ಕಮಿಷನರ್ ಖಡಕ್ ಎಚ್ಚರಿಕೆ - kannadanews

ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಕಮಿಷನರ್​ ರೌಡಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ರೌಡಿಗಳಿಗೆ ಪೊಲೀಸ್​ ಕಮಿಷನರ್ ಖಡಕ್ ಎಚ್ಚರಿಕೆ

By

Published : Jun 26, 2019, 9:54 PM IST

ಹುಬ್ಬಳ್ಳಿ:ನಗರದಲ್ಲಿ ಪುಡಿರೌಡಿಗಳ ದಾಂಧಲೇ ಅರಿತಿರುವ ಹುಬ್ಬಳ್ಳಿ-ಧಾರವಾಡ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ನಗರದ ವಿವಿಧೆಡೆ ರೌಡಿಶೀಟರ್​ಗಳ ಮನೆ ಪರಿಶೀಲನೆ ನಡೆಸಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್​ ಆಯುಕ್ತ ಎಮ್.ಎನ್.ನಾಗರಾಜ ಹೇಳಿದರು.

ರೌಡಿಗಳಿಗೆ ಪೊಲೀಸ್​ ಕಮಿಷನರ್ ಖಡಕ್ ಎಚ್ಚರಿಕೆ

ಅಶೋಕ್​ನಗರದಸಬ್ ಜೈಲ್ ಹತ್ತಿರ ಈ ಹಿಂದೆಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ನಗರದಲ್ಲಿ ರೌಡಿಶೀಟರ್​ಗಳ ಸೇಡಿನ ಹಗೆತನ ಅರಿತು ಅಶೋಕನಗರ, ಕಮರಿಪೇಟೆ, ಕಸಬಾಪೇಟೆ ಪೋಲಿಸ್ ಠಾಣೆಗಳಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ದಸ್ತಗಿರಿ' ಮಾಡಲಾಗಿದೆ ಎಂದು ತಿಳಿಸಿದರು. ಇದರಲ್ಲಿ 25 ಜನರ ಮೇಲೆ 307 ಕೇಸು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದರು.

ಇನ್ನೂ ಇಂದು ಡಿಸಿಪಿ ನಾಗೇಶ ನೇತೃತ್ವದಲ್ಲಿ ಅಶೋಕನಗರ, ಬೆಂಡಿಗೇರಿ, ಟೌನ್, ಕಸಬಾಪೇಟೆ, ವಿದ್ಯಾನಗರ, ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ 25 ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ‌ ಮಾಡಿ‌ ಪರಿಶೀಲನೆ ಮಾಡಲಾಗಿದೆ. ನಗರದಲ್ಲಿ ಶಾಂತಿ ಕದಡದಂತೆ ರೌಡಿಶೀಟರ್​ಗಳಿಗೆ ಎಚ್ಚರಿಕೆ ಕೊಡಲಾಗಿದೆ ಎಂದರು. ನಗರದಲ್ಲಿ ನಡೆಯುತ್ತಿರುವ ಪ್ರಕರಣಗಳಲ್ಲಿ ಹೆಚ್ಚಾಗಿ 18 ರಿಂದ 22ವಯಸ್ಸಿನ‌ವರೇ ಆರೋಪಿಗಳಾಗಿದ್ದಾರೆ. ಇವರಿಗೆ ಜೀವನದ ಮಹತ್ವ ತಿಳಿಸಿ ತಿದ್ದಿಕೊಳ್ಳಲು ಹೇಳಲಾಗುವುದು ಇಲ್ಲವಾದರೇ ಕಾನೂನು ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಚ್ಚರಿಕೆ ನೀಡಿದರು.

ABOUT THE AUTHOR

...view details