ಕರ್ನಾಟಕ

karnataka

ETV Bharat / state

ಎಟಿಎಮ್​ಗೆ ಹೋಗಿದ್ದಕ್ಕೆ ರಕ್ತ ಬರೋ ತರ ಹೊಡೆಯೋದಾ: ಹುಬ್ಬಳ್ಳಿಯಲ್ಲಿ ಪೊಲೀಸ್​ ದರ್ಪ - Police attack young man in Hubli

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಾನೆ ಎಂದು ಆರೋಪಿಸಿ ಯುವಕನಿಗೆ ಪಿಎಸ್​ಐ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹುಬ್ಬಳ್ಳಿಯಲ್ಲಿ ಪೊಲೀಸ್​ ದರ್ಪ
ಹುಬ್ಬಳ್ಳಿಯಲ್ಲಿ ಪೊಲೀಸ್​ ದರ್ಪ

By

Published : May 28, 2021, 4:09 PM IST

ಹುಬ್ಬಳ್ಳಿ:ಅಗತ್ಯ ವಸ್ತು ಖರೀದಿಸಲು ಎಟಿಎಮ್​ಗೆ ಹಣ ತರಲು ಹೋದ ಯುವಕನಿಗೆ ಹಳೇ ಹುಬ್ಬಳ್ಳಿ ಪಿಎಸ್​ಐ ಲಾಠಿಯಿಂದ ಥಳಿಸಿದ್ದಾರೆ ಎಂದು ಯುವಕನ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪೊಲೀಸ್​ ದರ್ಪ

ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪೋಲಿಸ್ ಇಲಾಖೆಗೆ ಅನಗತ್ಯ ಓಡಾಡುವ ಸಾರ್ವಜನಿಕರಿಗೆ ದಂಡ ಹಾಗೂ ತಿಳಿ ಹೇಳಬೇಕು ಎಂದು ಆದೇಶಿಸಿದೆ. ಆದರೆ, ಪಿಎಸ್ಐ ಸುಖಾನಂದ ಶಿಂಧೆ ಹಳೇ ಹುಬ್ಬಳ್ಳಿ ನಿವಾಸಿ ರೆಹಮತ್​ ಉಲ್ಲಾ ಎಂಬಾತನಿಗೆ ಬೈಕ್ ನಿಲ್ಲಿಸಲಿಲ್ಲ ಎಂದು ಲಾಠಿಯಿಂದ ಹಿಗ್ಗಾ - ಮುಗ್ಗಾ ಥಳಿಸಿದ್ದಾರೆ.

ಇನ್ನೂ ಘಟನೆಯಲ್ಲಿ ಯುವಕನ ತಲೆಗೆ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವವಾಗಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿರುವ ಪಿಎಸ್​ಐ ಸುಖಾನಂದ ಶಿಂಧೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

1000 ಅಲೋಪತಿ ಡಾಕ್ಟರ್​ಗಳನ್ನ​​​​​​​​​ ಆಯುರ್ವೇದ ವೈದ್ಯರನ್ನಾಗಿ ಮಾಡುತ್ತೇವೆ: ಬಾಬಾ ರಾಮದೇವ್

ABOUT THE AUTHOR

...view details