ಹುಬ್ಬಳ್ಳಿ :ಭಾರತೀಯ ಜನತಾ ಪಕ್ಷದ ಮುಖಂಡರೋರ್ವರ ಸಂಬಂಧಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಕೊಲೆಗೆಡುಕರನ್ನು ಮೂರೇ ಗಂಟೆಯಲ್ಲಿ ಬಂಧಿಸುವಲ್ಲಿ ಉತ್ತರ ವಲಯ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ. ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ಅವರ ಚಿಕ್ಕಪ್ಪನ ಮಗ ಅಭಿಷೇಕ್ ಗೌಡ ಪಾಟೀಲ ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ಕೊಲೆ ಮಾಡಿ ಪರಾರಿಯಾದ ಪ್ರವೀಣ್ ಬೇವಿನಕಟ್ಟಿ, ಸಾಯಿ ಉಣಕಲ್ ಹಾಗೂ ಕುಮಾರ್ ಇದ್ದಲಗಿ ಎಂಬು ಆರೋಪಿಗಳನ್ನ ಎಸಿಪಿ ವಿನೋದ್ ಮುಕ್ತೇದಾರ್ ನೇತೃತ್ವದ ತಂಡ ಬರೀ ಮೂರೇ ಗಂಟೆಯಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕೆಲವು ದಿನಗಳ ಹಿಂದೆ ಅಭಿಷೇಕ್ನೊಂದಿಗೆ ಜಗಳವಾಡಿದ್ದ ಪ್ರವೀಣ್ ಬೇವಿನಕಟ್ಟಿ, ಪಾಟೀಲರ ಮನೆಯ ಮುಂದಿನ ಕಾರಿನ ಗಾಜನ್ನು ಒಡೆದು ಹೋಗಿದ್ದ.