ಹುಬ್ಬಳ್ಳಿ: ನಗರದ ಗೋಪನಕೊಪ್ಪದ ಬಸ್ ನಿಲ್ದಾಣದ ಬಳಿ ನಿನ್ನೆ ತಡರಾತ್ರಿ ನಡೆದ ಯುವಕರಿಬ್ಬರ ಡಬಲ್ ಮರ್ಡರ್ ನಗರದ ಜನರನ್ನು ಬೆಚ್ಚಿಬೀಳಿಸಿದೆ.
ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಎಂಬ ಯುವಕರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕರಿಬ್ಬರು ರಸ್ತೆ ಮಧ್ಯದಲ್ಲಿಯೇ ಅಸುನೀಗಿದ್ದಾರೆ.
ಮೊಬೈಲ್ನಲ್ಲಿ ಹರಿದಾಡುತ್ತಿದೆ ಹುಬ್ಬಳ್ಳಿ ಜೋಡಿ ಕೊಲೆ ದೃಶ್ಯ ಇದೀಗ ಕೊಲೆಯಾದ ಯುವಕರು ರಕ್ತದ ಮಡುವಿನಲ್ಲಿ ಬಿದ್ದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಸಾವಿನಂಚಿನಲ್ಲಿ ನರಳುತ್ತಿದ್ದ ಯುವಕರ ರಕ್ಷಣೆಗೆ ಯಾರೊಬ್ಬರೂ ಬಾರದೇ ಇರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಣ್ಣೆದುರಲ್ಲೇ ಪ್ರಾಣ ಬಿಡುತ್ತಿದ್ದರೂ ಅಲ್ಲಿದ್ದವರು ವಿಡಿಯೋ ಮಾಡುತ್ತಿದ್ದರು. ಇದೀಗ ಈ ವಿಡಿಯೋ ಜನರ ಮೊಬೈಲ್ ಫೋನ್ನಲ್ಲಿ ಹರಿದಾಡಲಾರಂಭಿಸಿದೆ. ಸದ್ಯ ಕೇಶ್ವಾಪುರ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಆರೋಪಿಗಳಿಗಾಗಿ ಶೋಧ ತೀವ್ರಗೊಳಿಸಿದ್ದಾರೆ