ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಜಿಲ್ಲೆಯ ಜನರು ವಿಶೇಷ ಮನವಿಯೊಂದನ್ನು ನೀಡಿದ್ದಾರೆ. 30 ವರ್ಷ ಅಧಿಕಾರ ಅನುಭವಿಸಿ, ಮುಖ್ಯಮಂತ್ರಿ ಅಲ್ಲದೇ ಸಚಿವರೂ ಆಗಿದ್ದ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿರುವ ಸಾಲು ಸಾಲು ಸಮಸ್ಯೆಗೆ ಪರಿಹಾರ ನೀಡುವಂತೆ ಜನತೆ ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಸಿ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿ: ಶೆಟ್ಟರ್ಗೆ ಜನರ ಮನವಿ - ಈಟಿವಿ ಭಾರತ ಕನ್ನಡ
ನಿಮ್ಮ ಹುಟ್ಟುಹಬ್ಬದ ಸಲುವಾಗಿಯಾದರೂ ಹುಬ್ಬಳ್ಳಿ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಾರ್ವಜನಿಕರು ಶೆಟ್ಟರ್ ಅನುಪಸ್ಥಿತಿಯಲ್ಲಿ ಆಪ್ತರಿಗೆ ಮನವಿ ಮಾಡಿದ್ದಾರೆ.
ಹುಟ್ಟುಹಬ್ಬದ ಶುಭಾಶಯ ಕೋರುವುದಲ್ಲದೇ ತಮ್ಮ ಬೇಡಿಕೆ ಈಡೇರಿಸಿ ಉಡುಗೊರೆ ನೀಡುವಂತೆ ಮನವಿ ಮಾಡಿದ್ದಾರೆ. ಸ್ವಹಿತಾಸಕ್ತಿಗೆ ಬಿಆರ್ಟಿಎಸ್ ಯೋಜನೆ ತಂದು ನಮ್ಮ ಜೀವ ತೆಗೆಯುತ್ತಿದ್ದಾರೆ. ಕಸದ ನಿರ್ವಹಣೆಯೂ ಆಗುತ್ತಿಲ್ಲ. ಕುಡಿಯುವ ನೀರು ಸಹ ದೊರೆಯುತ್ತಿಲ್ಲ. ಅಲ್ಲದೇ ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ. ಈ ರೀತಿಯ ಅನೇಕ ಸಮಸ್ಯೆಗಳಿವೆ. ನಿಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಾದರೂ ಈ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಾರ್ವಜನಿಕರು ಶೆಟ್ಟರ್ ಅನುಪಸ್ಥಿತಿಯಲ್ಲಿ ಆಪ್ತರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:'ಕಾನೂನು ಬಾಹಿರ ಕ್ಲಬ್, ಪಬ್‌ಗಳು, ಇಸ್ಪೀಟ್ ಅಡ್ಡೆಗಳ ಮೇಲೆ ಕ್ರಮ ಕೈಗೊಳ್ಳಿ'