ಹುಬ್ಬಳ್ಳಿ: ಪತಿಯ ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ಇಲ್ಲದೆ ಪುಟ್ಟ ಮಕ್ಕಳೊಂದಿಗೆ ಪರದಾಡುತ್ತಿದ್ದ ಮಹಿಳೆಗೆ 20 ನಿಮಿಷದಲ್ಲಿ ಪಾಸ್ ವ್ಯವಸ್ಥೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕ ಆಡಳಿತ ಕಾರ್ಯದಕ್ಷತೆ ಮೆರೆದಿದೆ.
ಅರವಿಂದ ನಗರದ ಯಶೋಧ ಲೋಕಾಪುರ ಎಂಬುವವರ ಪತಿ ಬಾಗಲಕೋಟೆಯ ನವನಗರದಲ್ಲಿ ತೀರಿಕೊಂಡಿದ್ದರು. ಆದ್ರೆ ಅವರು ಬಾಗಲಕೋಟೆಗೆ ತೆರಳಲು ಪಾಸ್ ಇಲ್ಲದೆ ತಮ್ಮ ಎರಡು ಚಿಕ್ಕ ಮಕ್ಕಳ ಜೊತೆಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ, ಅಂತ್ಯ ಸಂಸ್ಕಾರಕ್ಕೆ ತೆರಳಲು ಪಾಸ್ ನೀಡುವಂತೆ ಮನವಿ ಮಾಡಿದ್ದರು.