ಹುಬ್ಬಳ್ಳಿ: ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ. ಋತುಮಾನ ಬದಲಾಗುತ್ತಿದ್ದಂತೆ ವಾತಾವರಣದಲ್ಲಿ ಉಂಟಾದ ವ್ಯತ್ಯಾಸದಿಂದ ಸಾಮಾನ್ಯ ಕಾಯಿಲೆಯಾದ ನೆಗಡಿ, ಜ್ವರ , ಕೆಮ್ಮು ಕಾಣಿಸಲಾರಂಭಿಸಿವೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರೋಗಿಗಳಿಗೆ, ಸಕಾಲಕ್ಕೆ ಸರಿಯಾದ ಚಿಕಿತ್ಸೆ ಹಾಗೂ ಮಾತ್ರೆಗಳು ಸಿಗದೇ ಪರದಾಡುವ ಪ್ರಸಂಗ ಬಂದಿದೆ.
ಮಳೆಗಾಲದಲ್ಲಿ ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ , ಕೆಮ್ಮು ಕಾಣಿಸಿಕೊಳ್ಳುವುದು ಸಹಜ. ಆದರೆ ಈ ಎಲ್ಲಾ ರೋಗಗಳೇ ಕೊರೊನಾ ಕಾಯಿಲೆಯ ಲಕ್ಷಣಗಳಾಗಿರುವುದರಿಂದ, ಸಾಮಾನ್ಯ ರೋಗಿಗಳಿಗೆ ತಕ್ಷಣಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಮನೆ ಮದ್ದಿಗೆ ಜನರು ಮುಂದಾಗುತ್ತಿದ್ದಾರೆ.
ಈ ರೀತಿ ಸಾಮಾನ್ಯ ಕಾಯಿಲೆಗಳಿಗೆ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಹೋದ್ರೂ ಸಹ. ಯಾವುದೇ ಪ್ರಯೋಜನವಾಗುತ್ತಿಲ್ಲ.ಇನ್ನು ಭಯದಿಂದ ರೋಗಿಗಳು ಬಂದರೆ ನಾವು ತಪಾಸಣೆ ಮಾಡುವುದಿಲ್ಲ. ಕೊರೊನಾ ಇದ್ದರೂ ಇರಬಹುದು ನೀವು ಕಿಮ್ಸ್ಗೆ ಹೋಗಿ ಎಂದು ವೈದ್ಯರು ಹೇಳುತ್ತಿದ್ದಾರಂತೆ.
ಹುಬ್ಬಳ್ಳಿಯಲ್ಲಿ ಸಾಮಾನ್ಯ ಕಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಿಲ್ಲ ಮತ್ತೊಂದೆಡೆ ಜ್ವರ, ಕೆಮ್ಮು, ನೆಗಡಿಗಳಂತಹ ರೋಗಗಳಿಗೆ ಮಡಿಕಲ್ ಶಾಪ್‌ಗಳಲ್ಲಿ ಪ್ಯಾರಾಸಿಟಮಲ್ ಅಂಶವಿರುವ ಮಾತ್ರೆಗಳನ್ನು ಜನತೆ ಖರೀದಿಸುತ್ತಿದ್ದರು. ಮುಂಚೆ ಇದಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಇದೀಗ ಅದಕ್ಕೂ ಸಂಚಕಾರ ಬಂದಿದೆ. ವೈದ್ಯರ ಚೀಟಿಯಿಲ್ಲದೇ ಯಾವ ಮೆಡಿಕಲ್ ಶಾಪ್‌ಗಳು ಈ ಮಾತ್ರೆಗಳನ್ನು ನೀಡುತ್ತಿಲ್ಲ.
ಆದ್ದರಿಂದ ಮಳೆಗಾಲ ಸಮಯದಲ್ಲಿ ಕೆಮ್ಮು, ನೆಗಡಿ, ಜ್ವರ ಬರುವುದು ಸಾಮಾನ್ಯ. ಅತಿಯಾದ ಜ್ವರ ,ಗಂಟಲು ನೋವು ಕಂಡು ಬಂದ್ರೇ ಮಾತ್ರ ಅದು ಕೊರೊನಾ ಲಕ್ಷಣವಾಗುತ್ತೆ. ಆದ್ದರಿಂದ ಈ ಸಮಯದಲ್ಲಿ ಚಿಕಿತ್ಸೆ ನೀಡುವುದು ಉತ್ತಮ. ಭಯ ಪಡುವ ಅಗತ್ಯವಿಲ್ಲವೆಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನೂ ರೋಗಿಗಳ ಪರದಾಟ ಒಂದೆಡೆಯಾದರೆ, ಇನ್ನೊಂದೆಡೆ ಖಾಸಗಿ ಕ್ಲಿನಿಕ್‌ಗಳು ಸಹ ಸಂಕಷ್ಟ ಎದುರಿಸುವಂತಾಗಿದೆ. ಆಸ್ಪತ್ರೆಗೆ ಶೇ 70 ರಷ್ಟು ರೋಗಿಗಳು ಬರುವುದೇ ಇಂತಹ ಸಾಮಾನ್ಯ ಕಾಯಿಲೆಯಿಂದ.
ಆದರೆ ಇದೀಗ ಜ್ವರ , ಶೀತ , ಕೆಮ್ಮುಗಳಿಂದ ಬಳಲುವವರನ್ನು ಪರೀಕ್ಷಿಸಲು ಅವಕಾಶವಿಲ್ಲ. ಅವಕಾಶ ಕೊಟ್ಟರೂ ಕೊರೊನಾದಿಂದ ವೈದ್ಯರು ಹಿಂಜರಿಯುವುದು ಗ್ಯಾರಂಟಿ . ಹೀಗಾಗಿ ಖಾಸಗಿ ಆಸ್ಪತ್ರೆ ನಷ್ಟದಲ್ಲೇ ನಡೆಸುವುದು ಅನಿವಾರ್ಯವಾಗಿದೆ.