ಹುಬ್ಬಳ್ಳಿ :ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿನ ಮುಕುಂದ ನಗರದ ಆಟದ ಮೈದಾನ ನಿರ್ಮಾಣ ಮಾಡಲಾಗಿತ್ತು. ಆದರೆ, ಆಟದ ಮೈದಾನವನ್ನು ಕೆಲ ಕಾಣದ ಕೈಗಳು ಸೇರಿ ಉದ್ಯಾನವನ್ನಾಗಿ ಮಾರ್ಪಡು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಆಟದ ಮೈದಾನ ಉದ್ಯಾನವನವಾಗಿ ಮಾರ್ಪಡಿಸಿದ ಆರೋಪ
ಇಲ್ಲಿನ ಕೆಲ ಜನ ರಾತ್ರೋರಾತ್ರಿ ಉದ್ಯಾನವನ ಎಂಬ ಫಲಕ ಹಾಕಿ ಅದರಲ್ಲಿ ಮಂತ್ರಿಗಳ ಹೆಸರು ಹಾಕುವ ಮೂಲಕ ಅವರ ಹೆಸರಿಗೂ ಕಳಂಕ ತರುವ ಕೆಲಸ ಮಾಡಿದ್ದಾರೆ. ಆದ್ದರಿಂದ ಕೂಡಲೇ ಸಚಿವರು ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು, ಇಲ್ಲವಾದ್ರೆ ಕಾನೂನು ಮುಖಾಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ..
ಆಟದ ಮೈದಾನವನ್ನು ಉದ್ಯಾನವನ್ನಾಗಿ ಮಾರ್ಪಾಡು ಮಾಡಿದ್ದಲ್ಲದೇ ಸಚಿವರ ದಾರಿ ತಪ್ಪಿಸಿ ಅವರಿಂದಲೇ ಉದ್ಘಾಟನೆ ಮಾಡಿದ್ದಾರೆ. ಹೀಗಾಗಿ, ಈ ಮೂಲಕ ಕೆಲವರು ಇಲ್ಲಿನ ಅಧಿಕಾರಿಗಳ ಜತೆ ಸೇರಿ ಹಣ ದೋಚುವ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೆ ಅಲ್ಲ, ಇಲ್ಲಿನ ಕೆಲ ಜನ ರಾತ್ರೋರಾತ್ರಿ ಉದ್ಯಾನವನ ಎಂಬ ಫಲಕ ಹಾಕಿ ಅದರಲ್ಲಿ ಮಂತ್ರಿಗಳ ಹೆಸರು ಹಾಕುವ ಮೂಲಕ ಅವರ ಹೆಸರಿಗೂ ಕಳಂಕ ತರುವ ಕೆಲಸ ಮಾಡಿದ್ದಾರೆ. ಆದ್ದರಿಂದ ಕೂಡಲೇ ಸಚಿವರು ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು, ಇಲ್ಲವಾದ್ರೆ ಕಾನೂನು ಮುಖಾಂತರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.